ರಾಖಿ‌ತರಲು‌‌ ಹೋದ ಯುವತಿ ಕಾಣೆ

  • 14 Jan 2024 , 10:55 PM
  • Haveri
  • 106

ಹಾವೇರಿ: ರಾಣೇಬೆನ್ನೂರ ತಾಲೂಕಿನ ಹುಲ್ಲತ್ತಿ ಗ್ರಾಮದ ಯುವತಿ ಮನೆಯಿಂದ ರಾಣೇಬೆನ್ನೂರಿಗೆ ಹೋಗಿ ಮಹಿಳೆಯೊಬ್ಬಳು ಕಾಣೆಯಾದ ಘಟನೆ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಸಂಭವಿಸಿದೆ. ಸಂಗೀತಾ ಮಲ್ಲಪ್ಪ ಬೂದನೂರ (22) ಕಾಣೆಯಾದವಳು.

ಈಕೆಯು 5 ಅಡಿ ಎತ್ತರವಿದ್ದು ಗೋದಿಗೆಂಪು ಮೈಬಣ್ಣ, ಸಾಧಾರಣ ತೆಳ್ಳನೆ ಮೈಕಟ್ಟು, ಕೋಲು ಮುಖ, ಉದ್ದ ಮೂಗು, ತಲೆಯಲ್ಲಿ ಕಪ್ಪು ನೀಳ ಕೂದಲು ಹೊಂದಿದ್ದಾಳೆ.ಕನ್ನಡ ಭಾಷೆ ಮಾತನಾಡುತ್ತಾಳೆ.ಬಲಗೈ ಮೇಲೆ ಇಂಗ್ಲೀಷ್‍ನಲ್ಲಿ ಎಂ.ಎಸ್. ಅಂತಾ ಹಚ್ಚೆ ಹಾಕಿದ ಕಲೆ ಇದೆ. ಈಕೆಯ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಪೊಲೀಸ್‍ಕಂಟ್ರೋಲ್ ರೂಂ:08375-237368, ಎಸ್‍ಪಿ ಹಾವೇರಿ 08375-232800, ಡಿವೈಎಸ್‍ಪಿ ರಾಣೇಬೆನ್ನೂರ 08373-266311, 9480804521, ಗ್ರಾಮೀಣ ಸಿಪಿಐ 08373-08373-266404, 9480804536, ಪಿಎಸ್‍ಐ 08373-266433, 9480804552ಗೆ ಮಾಹಿತಿ ನೀಡುವಂತೆಗ್ರಾಮೀಣ ಪೊಲೀಸ್‍ ಠಾಣೆಯ ಪ್ರಕಟಣೆ ತಿಳಿಸಿದೆ

Read All News