ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯವಾದ ಆಂಜನೇಯ ನಗರ ವಸತಿ ನಿಲಯವನ್ನು ಅಜಮ ನಗರ ವಸತಿ ನಿಲಯಕ್ಕೆ ವರ್ಗಾವನೇ ಮಾಡುತ್ತಿದ್ದು, ವಸತಿ ನಿಲಯದ ಪ್ರತಿಶತ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಕಾರಣ ಅಜಮ್ ನಗರ ವಸತಿ ನಿಲಯದಲ್ಲಿಯೂ ಈಗಾಗಲೇ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸವಿದ್ದು, ಅವರಿಗೂ ಸಹ ಮೂಲ ಸೌಲಭ್ಯಗಳ ಕೊರತೆ ಇದೇ , ಈಗ ಆಂಜನೇಯ ನಗರ ವಸತಿ ನಿಲಯದ ವಿದ್ಯಾರ್ಥಿಗಳನ್ನು ವರ್ಗಾವಣೆ ಮಾಡುತ್ತಿದ್ದು, ಅಲ್ಲಿನ ಮೂಲಭೂತ ಸೌಕರ್ಯಕ್ಕೆ ತೊಂದರೆಯುಂಟು ಮಾಡಿ, ವಿದ್ಯಾರ್ಥಿಗಳ ವ್ಯಾಸಂಗದಲ್ಲಿ ಏರುಪೇರು ಜೊತೆಗೆ ಸಾರಿಗೆ ಸಮಸ್ಯೆಯನ್ನು ಕೂಡಾ ಅನುಭವಿಸುವ ವ್ಯವಸ್ಥೆ ಉಂಟು ಮಾಡುತ್ತಿದ್ದಾರೆ.
ಅಜಂ ನಗರ ವಸತಿ ನಿಲಯವು ಸಹ ಬಾಡಿಗೆ ಇದ್ದು, ಆಂಜನೇಯ ನಗರ ವಸತಿ ನಿಲಯವನ್ನು ವರ್ಗಾವಣೆ ಮಾಡುವುದು ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ. ಆಂಜನೇಯ ನಗರ ವಸತಿ ನಿಲಯದ ಎಲ್ಲಾ ವಿದ್ಯಾರ್ಥಿಗಳು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, ಮಹೇಶ ಪಿ.ಯು ಕಾಲೇಜು , ಉದಯ ಸ್ಕೂಲಗಳು ಈ ವಸತಿ ನಿಲಯದಿಂದ್ 2 ಕಿ.ಮೀ. ಅಂತರದಲ್ಲಿ ಈ ಎಲ್ಲ ಕಾಲೇಜುಗಳು ಇದ್ದು ಇಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ , ಇವರನ್ನು ಅಜಮ ನಗರ ವಸತಿ ನಿಲಯಕ್ಕೆ ವರ್ಗಾವಣೆ ಮಾಡಿದರೆ ಸಾರಿಗೆ ಸಮಸ್ಯೆ ಕೂಡಾ ಉಂಟಾಗುತ್ತದೆ.
ಆದ್ದರಿಂದ ಈ ವಸತಿ ನಿಲುಯದ ವರ್ಗಾವಣೆಯ ವಿಷಯವನ್ನು ಇಲ್ಲಗೆ ಕೈ ಬಿಟ್ಟು ವಿದ್ಯಾರ್ಥಿಗಳಿಗೆ ಆಂಜನೇಯ ನಗರ ವಸತಿ ನಿಲಯದಲ್ಲಿ ವಸತಿಗೆ ಮತ್ತು ವ್ಯಾಸಂಗಕ್ಕೆ ಅವಕಾಶ ಕಲ್ಪಸಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.