ಮೈಸೂರು : ಈ ಭಾರಿಯ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿಯಕರ್ನಾಟಕಪಬ್ಲಿಕ್ಸ್ಕೂಲ್ ಉತ್ತಮ ಫಲಿತಾಂಶವನ್ನು ದಾಖಲಿಸಿದೆ.
ಮಾನಸಎಚ್.ಎಂ. 625ಕ್ಕೆ555 ಅಂಕ ಗಳಿಸಿ ಪ್ರತಿಶತ 88.80% ಫಲಿತಾಂಶ ದಾಖಲಿಸಿ ಶಾಲೆಗೆ ಪ್ರಥಮಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಇನ್ನುಳಿದಂತೆ ವರ್ಷಿಣಿಎಚ್.ಎಂ.550 ಅಂಕ ಗಳಿಸಿ ಪ್ರತಿಶತ 88%ದ್ವಿತೀಯ ಸ್ಥಾನ ಪಡೆದರೆ ವರ್ಷಿತ ಸಿ.ಜೆ 547 ಅಂಕಗಳಿಸಿ ಪ್ರತಿಶತ 87.52%ತೃತೀಯಸ್ಥಾನ ಪಡೆದುಕೊಂಡಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಶಿಕ್ಷಕರು, ಸಿಬ್ಬಂದಿ ವರ್ಗ ಅಭಿನಂದನೆ ತಿಳಿಸಿ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ.