ಬೆಳಗಾವಿ:ಶಿಕ್ಷಕರ ಭವಿಷ್ಯ ಇರುವುದು ವಿದ್ಯಾರ್ಥಿಗಳ ಭವಿಷ್ಯದಲ್ಲಿ. ನಮಗಾಗಿ ವಿದ್ಯಾರ್ಥಿಗಳು ವಿನಃ ವಿದ್ಯಾರ್ಥಿಗಳಿಗಾಗಿ ನಾವಲ್ಲ. ನಮ್ಮ ಅಸ್ತಿತ್ವ ಇರುವುದು ವಿದ್ಯಾರ್ಥಿಗಳಿಂದ ಎಂದು ಕುಲಪತಿಗಳಾದ ರಾಮಚಂದ್ರಗೌಡ ಅಭಿಪ್ರಾಯಪಟ್ಟರು ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಆಯ್‌ಕ್ಯೂ ಎ ಸಿ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಯ್‌ಕ್ಯೂ ಎ ಸಿ ಸಂಯುಕ್ತಾಶ್ರಯದಲ್ಲಿ ನ್ಯಾಕ್ ಮಾನ್ಯತಾ ಪ್ರಕ್ರಿಯೆಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಿಬ್ಬಂದಿಗಾಗಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಯಾದ ಪ್ರೊ. ರಾಮಚಂದ್ರಗೌಡ ಅವರು ಮಾತನಾಡುತ್ತಾ, ಜಗತ್ತು ಅತೀ ವೇಗವಾಗಿ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಶ್ಯಕತೆಯೂ ಇದೆ. ನಮ್ಮ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಸುಧಾರಣೆಯಾಗದ ಹೊರತು ಉತ್ತಮ ಶಿಕ್ಷಣ ನಿರೀಕ್ಷೆ ಸಾಧ್ಯವಿಲ್ಲ ಎಂದರು.
ಉನ್ನತ ಶಿಕ್ಷಣ ಸುಧಾರಣೆ ಮತ್ತು ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ನ್ಯಾಕ್ ಮಾನ್ಯತೆ ಪಡೆದು ಕೊಳ್ಳುವ ಅವಶ್ಯಕತೆ ಇದೆ. ನಮ್ಮ ಮಹಾವಿದ್ಯಾಲಯವು ನ್ಯಾಕ್ ಪಡೆದುಕೊಳ್ಳುವುದರ ಮೂಲಕ ಭೌತಿಕ ಮತ್ತು ಬೌದ್ಧಿಕವಾಗಿ ಒಂದು ಮಾದರಿ ಮಹಾವಿದ್ಯಾಲಯವಾಗಲಿದೆ. ಆ ಮೂಲಕ ರಾಷ್ಟçಮಟ್ಟದಲ್ಲಿ ಗುರುತಿಸಿಕೊಳ್ಳಬಹುದಾಗಿದೆ ಎಂದರು. ಈಗಿನ ಹೊಸ ಶಿಕ್ಷಣ ನೀತಿಯ ಪ್ರಕಾರ ವಿಶ್ವವಿದ್ಯಾಲಯಗಳಲ್ಲಿ ಕೂಡ ಯುಜಿ ಕೋರ್ಸ್ಗಳನ್ನು ತೆರೆಯಬೇಕು. ರಾಣಿಚನ್ನಮ್ಮ ವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲಿ ಯುಜಿ ಕೋರ್ಸ್ಗಳನ್ನು ಆರಂಭಿಸಲಾಗುವುದು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಪರಿಷತ್ತಿನ ವಿಶೇಷ ಅಧಿಕಾರಿಗಳಾದ ಡಾ. ಎಂ. ಜಯಪ್ಪ ಅವರು, ಉನ್ನತ ಶಿಕ್ಷಣ ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ನ್ಯಾಕ್ ಮಾನ್ಯತೆಯನ್ನು ಪಡೆದುಕೊಳ್ಳಬೇಕು. ನಮ್ಮ ದೇಶದಲ್ಲಿ ಇರುವ ವಿಶ್ವವಿದ್ಯಾಲಯಗಳಲ್ಲಿ ಶೇ.35ರಷ್ಟು ಮತ್ತು ಮಹಾವಿದ್ಯಾಲಯಗಳಲ್ಲಿ ಶೇ. 19.5 ರಷ್ಟು ಮಾತ್ರ ನ್ಯಾಕ್ ಮಾನ್ಯತೆಯನ್ನು ಪಡೆದುಕೊಂಡಿವೆ. ಇದು ನಮ್ಮ ಶಿಕ್ಷಣ ಸಂಸ್ಥೆಗಳ ಸ್ಥಿತಿ-ಗತಿಯನ್ನು ಸೂಚಿಸುತ್ತದೆ. ಸರಕಾರ ಮತ್ತು ಯುಜಿಸಿಯ ಧನಸಹಾಯ ಪಡೆದು ಕೊಳ್ಳಲು ಸಂಸ್ಥೆಯು ನ್ಯಾಕ್ ಮಾನ್ಯತೆಯನ್ನು ಪಡೆದುಕೊಳ್ಳಲೇ ಬೇಕು.
ನ್ಯಾಕ್ ಮಾನ್ಯತೆಯನ್ನು ಪಡೆದುಕೊಳ್ಳುವುದುಈಗ ಮೊದಲಿನಷ್ಟು ಸುಲಭವಲ್ಲಎಂದರು. ವೇದಿಕೆಯಲ್ಲಿಕಾರ್ಯಾಗಾರದಸಂಪನ್ಮೂಲ ವ್ಯಕ್ತಿಗಳಾದ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರಾದ ಪ್ರೊ. ಶಿವಾನಂದ ಎಸ್. ಗೋರನಾಳೆ ಮತ್ತು ವಿಶ್ವವಿದ್ಯಾಲಯದಅಪರಾಧ ಮತ್ತು ನ್ಯಾಯಿಕಅಪರಾಧ ಶಾಸ್ತ್ರದ ನಿರ್ದೇಶಕರಾದ ಪ್ರೊ. ಆರ್. ಎನ್. ಮನಗೂಳಿ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ. ಶಂಕರಎಸ್. ತೇರದಾಳ ಸ್ವಾಗತಿಸಿದರು.
ಮಹಾವಿದ್ಯಾಲಯದ ಆಯ್‌ಕ್ಯೂ ಎ ಸಿ ಸಂಯೋಜಕರಾದ ಬಾಲಾಜಿ ಆಳಂದೆ ವಂದಿಸಿದರು. ಡಾ. ಮಲ್ಲೇಶ್‌ದೊಡ್ಡಲಕ್ಕಣ್ಣವರ್ ಮತ್ತುಡಾ. ಜ್ಯೋತಿ ಪಾಟೀಲ್ ನಿರೂಪಿಸಿದರು, ವಿದ್ಯಾರ್ಥಿ ಲಕ್ಷö್ಮಣನಾಯ್ಕ ಪ್ರಾರ್ಥಿಸಿದರು. ಕಾರ್ಯಾಗಾರದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.