ಜಮೀರಅಹ್ಮದ ಕೊಂಡಾಡಿದ ಸತೀಶ ಜಾರಕಿಹೊಳಿ

  • 19 Dec 2023 , 9:52 AM
  • Belagavi
  • 118

ಬೆಳಗಾವಿ: ಜಮೀರ ಅಹ್ಮದ ಕಾಂಗ್ರೆಸ್ ಪಕ್ಷದ ಉನ್ನತ ನಾಯಕ. ಅವರನ್ನು ನೀವೆಲ್ಲರೂ ಎಲ್ಲ ರೀತಿಯಿಂದ ಬೆಳೆಸಬೇಕಿದೆ. ಅವರು ನಮ್ಮ ಪಕ್ಷದ ಬಾಹುಬಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಶಾಸಕ ಜಮೀರ ಅಹ್ಮದ ಅವರನ್ನು ಕೊಂಡಾಡಿದರು.
 

ನಗರದಲ್ಲಿ ಶನಿವಾರ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು. ಆಗಸ್ಟ್ ೩ ರಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿದೆ. ಹಾಗಾಗಿ, ಬೆಂಗಳೂರಿನಿಂದ ನಮಗೆ ಆಹ್ವಾನ ನೀಡಲು ಜಮೀರು ಬಂದಿರುವ ಜಮೀರ ಅಹ್ಮದ ಅವರಿಗೆ ತಮ್ಮದೇ ಆದ ಶಕ್ತಿಯಿದೆ ಎಂದರು. ಒಂಭತ್ತು ತಿಂಗಳಲ್ಲಿ ಚುನಾವಣೆ ಬರುವ ಸಾಧ್ಯತೆಗಳಿವೆ.

ಈ ಚುನಾವಣೆಯಲ್ಲಿ ನೀವೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು. ಚುನಾವಣೆ ಎದುರಿಸಲು ಪಕ್ಷದ ಕಾರ್ಯಕರ್ತರು ಗಟ್ಟಿಯಾಗಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಜಾಫರ್ ಶರೀಫ್ ನಂತರ ಮತ್ತೊಬ್ಬ ಮುಸ್ಲಿಂ ನಾಯಕರಾಗಲು ಜಮೀರ ಅಹ್ಮದ ಅವರಿಗೆ ಅವಕಾಶವಿದೆ. ಎಲ್ಲೇ ಹೋದರೂ ಜಮೀರ್ ಐದರಿಂದ ಹತ್ತು ಲಕ್ಷ ಹಣ ಜೇಬಿನಲ್ಲಿರುತ್ತದೆ. ನಮ್ಮ ಬಳಿ ಅಷ್ಟು ಹಣ ಇಟ್ಟುಕೊಳ್ಳುವುದಿಲ್ಲ. ವಾಪಸ್ ಹೋಗುವಾಗ ಖಾಲಿ ಜೇಬಿನಿಂದ ಹೋಗುತ್ತಾರೆ.

ಇಡಿ, ಐಟಿ ನಿಮ್ಮ ಹಿಂದೆ ಬಿದ್ದಿದ್ದೆ ಆದರೆ ನಿಮ್ಮ ಜತೆಗೆ ಪಕ್ಷ ಮತ್ತು ಸಮುದಾಯ ಇದ್ದೇ ಇದೆ. ಮಂದಿನ ದಿನಗಳಲ್ಲಿ ಅಚ್ಛೆದಿನ ಬರಲಿದೆ. ಅದಕ್ಕಾಗಿ ಕಾಯಬೇಕು. ನಿಮ್ಮ ಶಕ್ತಿ ಕಾಂಗ್ರೆಸ್ ಶಕ್ತಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಮುಂದಿನ ದಿನಗಳಲ್ಲಿಯೂ ಜಮೀರ ಅವರು ಬೆಳಗಾವಿಗೆ ಆಗಮಿಸುವರು. ನಿಮಗೂ ಒಬ್ಬರೂ ಲೀಡರ್ ಬೇಕಾಗುತ್ತದೆ. ಎಲ್ಲ ಕಡೆಗಳಲ್ಲಿ ಸಭೆ ಮಾಡುತ್ತಾರೆ. ಅಲ್ಪಸಂಖ್ಯಾತ ಸಮುದಾಯದಿಂದ ಜಮೀರ್ ಅಹ್ಮದ ನಾವು ಕೂಡ ಮುಖ್ಯಮಂತ್ರಿ ಆಕಾಂಕ್ಷಿ ಅಂದಿದ್ದಾರೆ. ನಮಗೂ ಸಾಕಷ್ಟು ಜನ ಕೇಳುತ್ತಾರೆ. ಆದ್ರೇ ನಮ್ಮ ಸರದಿ ಇನ್ನೂ ದೂರ ಇದೆ ಎಂದು ಹೇಳಿದರು.

ದಿಲ್ಲಿ ಅಬಿ ದೂರ್ ಹೈ. ನಮ್ಮದು ಮುಖ್ಯಮಂತ್ರಿ ಕುರ್ಚಿಗಾಗಿ ಲಡಾಯಿ ಇಲ್ಲ. ಈಗ ನಮ್ಮ ಜನರಿಗೆ ಸಮಾನತೆ ಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಹೋರಾಟವಿದೆ. ಈಗ ನಮ್ಮದು ಕುರ್ಚಿಗಾಗಿ ಪೈಟ್ ಇಲ್ಲ. ಸಮಾನತೆಗಾಗಿ ಹೋರಾಟವಿದೆ ಎಂದು ಸತೀಶ ಜಾರಕಿಹೊಳಿ ಹೇಳಿದರು. ಶಾಸಕ ಜಮೀರ ಅಹ್ಮದ, ಸೈಯ್ಯದ ಮನ್ಸೂರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Read All News