ಒಬಿಸಿ ಸಮುದಾಯದ ಮುಖಂಡ ಸಭೆ ಆಯೋಜನೆ

  • 14 Jan 2024 , 10:19 PM
  • Belagavi
  • 96

ಬೆಳಗಾವಿ: ಶಾಸಕ ಅನಿಲ ಬೆನಕೆ ಅವರ ಅಧ್ಯಕ್ಷತೆಯಲ್ಲಿ ಸದಾಶಿವ ನಗರದ ರಡ್ಡಿ ಭವನದಲ್ಲಿ ಬೆಳಗಾವಿ ಮಹಾನಗರ ಜಿಲ್ಲಾ ಒಬಿಸಿ ಮೋರ್ಚಾದ ಮುಖಂಡರ ಹಾಗೂ ಕಾರ್ಯಕರ್ತರ ಪೂರ್ವ ಸಭೆಯನ್ನು ಆಯೋಜಿಸಲಾಗಿತ್ತು.

ಈ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಅರಿವು ಹಾಗೂ ಸಮಾಜದ ದುರ್ಬಲ ಕುಟುಂಬಗಳ ಉನ್ನತಿಗಾಗಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವಿಧ ಸಮಾಜ ಪ್ರಮುಖರೊಂದಿಗೆ ಚರ್ಚಿಸಲಾಯಿತು. ಮುಂದೆ ಬರುವ ಯೋಜನೆಗಳು ಅಥವಾ ಮೀಸಲಾತಿ ಅನುಷ್ಠಾನದ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು.
 

ಜೊತೆಗೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರು, ಬಿಜೆಪಿ ಸರ್ಕಾರವು ಒಬಿಸಿ ವರ್ಗಗಳಿಗೆ ವಿವಿಧ ಯೋಜನೆಗಳ ಲಾಭವನ್ನು ಖಾತ್ರಿಪಡಿಸುವ ಮೂಲಕ ಅವರ ಸಬಲೀಕರಣ ಮತ್ತು ಉನ್ನತಿಗಾಗಿ ಅವಿರತವಾಗಿ ಶ್ರಮಿಸುತ್ತಿದೆ.‌ ಅವರ ಸುಧಾರಣೆಗೆ ನಾವು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಮುಂದೆ ಒಬಿಸಿ ಸಮಾಜಕ್ಕೆ ಸರ್ಕಾರದಿಂದ ಇರುವ ಸೌಲಭ್ಯಗಳ ಬಗ್ಗೆ ಅರಿಯು ಮೂಡಿಸಬೇಕು. ಸೌಲಭ್ಯಗಳಿಂದ ಯಾರು ವಂಚಿತರಾಗಬಾರದು.‌ ಆ ನಿಟ್ಟಿನಲ್ಲಿ ಎಲ್ಲಾ ಸಮಾಜದ ಮುಖಂಡರು ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು. ‌ ಬಿಜೆಪಿ ಮಹಾನಗರ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷರಾದ ವಿಜಯ್ ಕದಂ ಪ್ರಧಾನ ಕಾರ್ಯದರ್ಶಿ ನಿತಿನ್ ಸುಳಗಾರ, ಶೇಷಕುಮಾರ ಜಾವಲ್ಕರ್, ಬಿಜೆಪಿ ಉತ್ತರ ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷರಾದ ವಿಕ್ರಂ ಬಾಳೇಕುಂದ್ರಿ, ಬಿಜೆಪಿ ದಕ್ಷಿಣ ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷರಾದ ವಿನಾಯಕ ಸುರೇಪನ್, ವಿಶ್ವಕರ್ಮ ಪಾಂಚಾಲ ಸಮಾಜ ಪ್ರಮುಖರಾದ ಭರತ್ ಶಿರೋಳ್ಕರ್, ಹಿಂದೂ ಖಾಟಿಕ್ ಸಮಾಜ ಪ್ರಮುಖರಾದ ಉದಯ ಘೋಡಖೆ, ಸಾವಜಿ ಕ್ಷತ್ರಿಯ ಸಮಾಜ ಪ್ರಮುಖರಾದ ಅನಿಲ್ ಚೌಧರಿ, ಭಾವಸಾರ್ ಕ್ಷತ್ರಿಯ ಸಮಾಜ ಪ್ರಮುಖರಾಸ ಮದನ್ ಗೋಜೆ, ನಾಮದೇವ್ ಶಿಂಪಿ ಸಮಾಜ ಪ್ರಮುಖ್ ಅಶೋಕ್ ರೆಡೇಕರ್, ಕುಂಬಾರ ಸಮಾಜದ ಪ್ರಮುಖರಾದ ದಿಗಂಬರ ಗುಂಜಿಕರ್,ತೇಲಿ ಸಮಾಜ ಪ್ರಮುಖವಾದ ಪ್ರಕಾಶ ಬಾಳೇಕುಂದ್ರಿ, ಗೌಡ್ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖರು, ಹರಪದ್ ಸಮಾಜದ ಪ್ರಮುಖರು, ನಾಭಿಕ ಸಮಾಜದ ಪ್ರಮುಖರಾದ ಪಿಂಟು ಕಾಳೆ, ಸವಿತಾ ಸಮಾಜ ಪ್ರಮುಖರಾದ ಶೇಖರರೆಡ್ಡಿ, ಪರಿತ ಸಮಾಜದ ವಿಠ್ಠಲ್ ಪಾಳೇಕರ್, ಕಾಳಿಕಾ ದೈವಜ್ಞ ಸಮಾಜ ಪ್ರಮುಖರಾದ ನಿತಿನ್ ಕಲ್ಘಾಟ್ಕರ್, ನೇಕಾರ ಸಮಾಜದ ಪ್ರಮುಖರು, ಕುಣಬಿ ಸಮಾಜದ ಪ್ರಮುಖರು, ವಿಶ್ವಕರ್ಮ ಸಮಾಜದ ಪ್ರಮುಖರು, ಹಣಭಾರ ಸಮಾಜದ ಪ್ರಮುಖರಾದ ಪ್ರವೀಣ ಪಾಟೀಲ, ಕಾರ್ಯಕರ್ತರು ಉಪಸ್ಥಿತರಿದ್ದರು.

Read All News