ಅಥಣಿ : ಎತ್ ನೀರಾವರಿ ಯೋಜನೆಯ ಕಾಲುವೆಯಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಂಕಂಚ್ಚಿ ಗ್ರಾಮದ ಹೊರವಲಯದ ಏತ ನೀರಾವರಿ ಯೋಜನೆ ಕಾಲುವೆಯಲ್ಲಿ ಮೃತ ದೇಹ ಕಾಣಿಸಿದ್ದು.
ಗ್ರಾಮಸ್ಥರು ಐಗಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಿದ್ದಂತೆ. ಸ್ಥಳಕ್ಕೆ ಆರಕ್ಷಕರು ಬಂದು ಪರಿಶೀಲಿಸಿದಾಗ ಮೃತ ದುರ್ದೈವಿಯ ಗುರುತು ಪತ್ತೆ ಆಗದೆ ಇರುವುದರಿಂದ ದೇಹದಲ್ಲಿರುವ ವಸ್ತುಗಳು ಹಾಗೂ ಚಿತ್ರಗಳನ್ನು ಪೊಲೀಸರು ಗುರುತಿಸಿ ಈ ವಕ್ತಿಯ ಮಾಹಿತಿ ಇದ್ದರೆ ಐಗಳಿ ಅಥವಾ ಅಥಣಿ ಪೊಲೀಸರನ್ನು ಸಂಪರ್ಕಿಸುವಂತೆ ಆರಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಕೊಲೆ ಶಂಕೆ ಎಂದು ಪೊಲಿಸರು ಅನುಮಾನ ವ್ಯಕ್ತಪಡಿಸಿದ್ದಾರೆ. ದುರುದ್ದೇಶದಿಂದ ಕೊಲೆ ಮಾಡಿ ಸಾಕ್ಷಿ ನಾಶಕ್ಕೆ ಈ ಸ್ಥಳದಲ್ಲಿ ಶವ ಬಿಸಾಡಿರಬಹುದು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದು. ಘಟನೆ ಕುರಿತಂತೆ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.