ಬೆಳಗಾವಿ : "ಆಧುನಿಕಜೀವನ ಪದ್ಧತಿ,ಅತಿಯಾದಜನಸಂಖ್ಯೆ,ಹಾಗೂ ಕೈಗಾರಿಕರಣದಿಂದ ಕೆರೆಗಳೆಲ್ಲ ನಿವೇಶನಗಳಾಗುತ್ತಿದೆ.ಊರಿನ ಕೆರೆಗಳು ಆಟದ ಮೈದಾನವಾಗುತ್ತಿದೆ.ಇದರಿಂದಜನ ಜಾನುವಾರುಗಳಿಗೆ ನೀರಿಲ್ಲದಾಗಿದ್ದು,ಕೆರೆಗಳನ್ನು ಪುನಃಶ್ಚೇತನಗೊಳಿಸಿ ನೀರುಣಿಸುವ ಪುಣ್ಯದ ಕೆಲಸವನ್ನು ಪೂಜ್ಯರು ಕೆರೆಗಳ ಹೂಳೆತ್ತುವ ಮೂಲಕ ಮಾಡುತ್ತಿದ್ದಾರೆ" ಎಂದುಜಿಲ್ಲಾ ನಿರ್ದೇಶಕರಾದ ಪ್ರದೀಪ ಶೆಟ್ಟಿಅಭಿಪ್ರಾಯ ಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಖಾಸಭಾಗತಾಲೂಕು, ಕೆರೆಅಭಿವೃದ್ದಿ ಸಮಿತಿ ಬಸವನ ಕುಡಚಿಇವರ ಸಹಯೋಗದೊಂದಿಗೆ ಧರ್ಮಸ್ಥಳ ಯೋಜನೆ ವತಿಯಿಂದರಚಿಸಲಾದ "ನಮ್ಮೂರು-ನಮ್ಮಕೆರೆ" ಕಾರ್ಯಕ್ರಮದಡಿ ಪುನಃಶ್ಚೇತನಗೊಳಿಸಲಾದ 400ನೇ ಕಳಸಗಿರಿ ಕೆರೆಯ ಹಸ್ತಾಂತರ ಮತ್ತು ಬಾಗಿನ ಅರ್ಪಣೆಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದಅವರು, ಇಡೀಜೀವಸಂಕುಲಕ್ಕೆ ನೀರುಒದಗಿಸುವ ಕೆರೆಗಳನ್ನು ಉಳಿಸುವ ಕೆಲಸ ಮಾಡಬೇಕಾಗಿದೆ.ಕಳಸಗಿರಿ ಕೆರೆಯನ್ನುಯೋಜನೆಯ 480423 ₹ ಅನುದಾನದಲ್ಲಿ ಸುಮಾರು 305 ಘಂಟೆ ಹಿಟಾಚಿ ಮೂಲಕ ಕೆಲಸ ಮಾಡಿ, 5445 ಟ್ರ‍್ಯಾಕ್ಟರ್ ಮತ್ತು 643 ಟಿಪ್ಪರ್, ಹೊರತೆಗೆದ ಫಲವತ್ತಾದ ಮಣ್ಣನ್ನು 104 ಜನರೈತರುತಮ್ಮ ಹೊಲಗಳಿಗೆ ಹಾಕಿಸಿಕೊಂಡಿರುತ್ತಾರೆ.
ಇದರ ನಿರ್ವಹಣೆಯನ್ನುಗ್ರಾಮದವರು ಮಾಡಬೇಕುಎಂದರು. ನಾಮಫಲಕಅನಾವರಣ ಮಾಡಿದ ನಗರ ಸೇವಕರಾದ ಬಸವರಾಜ ಮೋದಗೆಕರಇವರು ಮಾತನಾಡಿಕರೆಯಲ್ಲಿ ನೀರುತುಂಬಿರುವದರಿAದ ನಮ್ಮಊರಿನ ಬಾವಿ,ಬೋರವೆಲ್ಗಳಿಗೇ ಅಂತರ್ಜಲಹೆಚ್ಚಾಗಿದ್ದು ನೀರಿನಅಭಾವಕ್ಕೆ ಶಾಶ್ವತ ಪರಿಹಾರವನ್ನು ಧರ್ಮಸ್ಥಳದವರು ನೀಡಿದ್ದಾರೆ ,ಮಹಾನಗರ ಪಾಲಿಕೆಯಿಂದ ನಾವು ಮುಂದಿನ ಕೆಲಸಗಳಿಗೆ ಉತ್ತಮ ಸಹಕಾರ ನೀಡುತ್ತೇವೆ" ಎಂದು ಹೇಳಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನುಕೆರೆ ಸಮಿತಿಅಧ್ಯಕ್ಷರಾದ ಶೀತಲ ಪಾಟೀಲ ವಹಿಸಿದ್ದರು. ಕಾರ್ಯಕ್ರಮದಲ್ಲಿಊರಿನ ಶಾಸ್ತ್ರೀಯವರಾದ ನೀಲಕಂಠ ಶಾಸ್ತ್ರೀ,ತಾಲೂಕು ಯೋಜನಾಧಿಕಾರಿ ಮಂಜುನಾಥಎನ್‌ಆರ್. ಅಭಿಯಂತರರಾದ ನಿಂಗರಾಜ,ಬಸವೇಶ್ವರದೇವಸ್ಥಾನ ಸಮಿತಿಅಧ್ಯಕ್ಷರಾದ ಮಹಾವೀರ ಪಾಟೀಲ,ಕೆರೆ ಸಮಿತಿಜೊತೆ ಕಾರ್ಯದರ್ಶಿ ಬಸವರಾಜ ಹಣ್ಣೀಕೆರೆ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕ ವಿನಾಯಕ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಮಂಜುನಾಥಗೌಡ ನಿರೂಪಿಸಿದರು.ರೈತರು,ಕೆರೆ ಸಮಿತಿ ಸದಸ್ಯರು,ಯೋಜನೆ ಸಂಘದ ಸದಸ್ಯರು,ಸೇವಾಪ್ರತಿನಿಧಿಯವರಾದ ಸುನಂದ ಮಲ್ಲಪ್ಪ ಮುನವಳ್ಳಿ,ನೇತ್ರಾವತಿ ರಾಕೇಶ ಹಡಪದ ಭಾಗವಹಿಸಿದ್ದರು.