ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಾಲಕೀಯರ ಮೇಲು ಗೈ : ಎಮ್ ಇ ಎಸ್ ಸಂಸ್ಥೆಗೆ ಹೆಚ್ಚಿದ ಕೀರ್ತಿ

  • 15 Jan 2024 , 3:54 AM
  • Vijayapur
  • 103

ವಿಜಯಪುರ : 2019-20 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಚಡಚಣ ಪಟ್ಟಣದ ಎಮ್ ಇ ಎಸ್ ಸಂಸ್ಥೆಯ ಪ್ರೌಡ ಶಾಲೆಯ ವಿದ್ಯಾರ್ಥಿನಿಯಾದ ಸೃಷ್ಟಿ ಚೋಳಕೆ 625 ಕ್ಕೆ 565 ಅಂಕಗಳು ಪಡೆಯುವ ಮೂಲಕ ಸಂಸ್ಥೆಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅದೇ ರೀತಿಯಾಗಿ ಸ್ನೇಹಾ ಬಂಡರಕವಟೆ ವಿದ್ಯಾರ್ಥಿನಿ 625 ಕ್ಕೆ 561 ಅಂಕಗಳು ಪಡೆಯುವ ಮೂಲಕ ದ್ವಿತಿಯ ಸ್ಥಾನ ಹಾಗೂ ಐಶ್ವರ್ಯ ಕಟಗೇರಿ ವಿದ್ಯಾರ್ಥಿನಿ 625 ಕ್ಕೆ 550 ಅಂಕಗಳು ಪಡೆಯುವ ಮೂಲಕ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ. ಈ ರೀತಿಯಾಗಿ ಮೂರು ಸ್ಥಾನವನ್ನು ವಿದ್ಯಾರ್ಥಿನಿರೆ ಗಿಟ್ಟಿಸಿಕೊಳ್ಳುವ ಮೂಲಕ ಮೇಲು ಗೈ ಸಾಧಿಸಿದ್ದಾರೆ. ಇವರ ಈ ಸಾಧನೆಯನ್ನು ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯವರು ಹರ್ಷ ವ್ಯಕ್ತಪಡಿಸಿ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ. ವರದಿ: ಮಲಿಕ್ ಎಲ್ ಜೆ

Read All News