ಸೂಕ್ಷ್ಮವಾಗಿ ತಮ್ಮ ಅಸಮಾಧಾನ ಹೊರ ಹಾಕಿದ; ಚಾಣಾಕ್ಷ ರಮೇಶ ಕತ್ತಿ

  • 14 Jan 2024 , 9:47 PM
  • Belagavi
  • 129
ಬೆಳಗಾವಿ: ಉಮೇಶ್‌ ಕತ್ತಿ ಉತ್ತರ ಕರ್ನಾಟಕ ಭಾಗದ ಅತೃಪ್ತ ಶಾಸಕರೊಂದಿಗೆ ಔತಣಕೂಟ ಹೆಸರಿನಲ್ಲಿ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಬೆನ್ನಲ್ಲೇ ಬಿಜೆಪಿ ವಿರುದ್ಧ ಉಮೇಶ ಕತ್ತಿ ಸಹೋದರ ರಮೇಶ ಕತ್ತಿ ಸೂಕ್ಷ್ಮವಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ನಮ್ಮ ಕುಟುಂಬಕ್ಕೆ ಸತತವಾಗಿ ಅನ್ಯಾಯವಾಗುತ್ತಿದೆ ಆತ 8 ಬಾರಿ ಆಯ್ಕೆಯಾದರೂ ಸಹ ಆತನಿಗೆ ಸಚಿವ ಸ್ಥಾನ ಕೊಡಲಿಲ್ಲ, ಲೋಕಸಭೆ ಚುನಾವಣೆಯಲ್ಲಿ ನನಗೆ ಟಿಕೇಟ್ ಕೈ ತಪ್ಪಿಸಿದ ಕಾರಣವನ್ನೂ ಸಹ ಹೇಳಲಿಲ್ಲ, ನಾವು ಹೊಸದಾಗಿ ಏನನ್ನೂ ಸಹ ಕೇಳುತ್ತಿಲ್ಲ, ಯಡಿಯೂರಪ್ಪನವರು ಬೆಳಗಾವಿಯಲ್ಲಿ ನನಗೆ ರಾಜ್ಯ ಸಭೆಗೆ ನನ್ನನ್ನು ಕಳಿಸುವ ಭರವಸೆ ನೀಡಿ ಹೋಗಿದ್ದರು, ಆ ಭರವಸೆಯನ್ನು ಈಡೇರಿಸುವಂತೆ ನಾವು ಮನವಿ ಮಾಡಿದ್ದೆವೆ ಅಷ್ಟೆ, ನನ್ನ ಸಹೋದರ ವಜ್ರ ಡೈಮಂಡ್ ಇದ್ದಹಾಗೆ, ಆತ ಮುಂದೆ ಸಚಿವ ಆಗೆ ಆಗ್ತಾನೆ ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ, ಉತ್ತರ ಕರ್ನಾಟಕದ ಶಾಸಕರು ಕೇವಲ ಊಟಕ್ಕಾಗಿ ಮನೆಗೆ ಬಂದಿದ್ದರು, ಹೊರತು ಯಾವುದೇ ಚರ್ಚೆ ಅಲ್ಲಿ ಆಗಿಲ್ಲ ಎಂದು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Read All News