ಕುಂದಾನಗರಿಗೆ ಕೊಂಚ ನೆಮ್ಮದಿ ನೀಡಿದ ಹೆಲ್ತ್ ಬುಲೆಟಿನ್

  • 15 Jan 2024 , 3:12 AM
  • Belagavi
  • 209
ಬೆಳಗಾವಿ: ರಾಜ್ಯದಲ್ಲಿ ಇಂದು 63 ಹೊಸ ಪ್ರಕರಣಗಳು ಸೇರಿ ಒಟ್ಟು 1458 ಕ್ಕೆ ಕೊರೋನಾ ಪಾಸಿಟಿವ್ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಇಂದು ಯಾರಿಗೂ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿಲ್ಲದಿರುವುದು ಜನರಿಗೆ ಕೊಂಚ ನೆಮ್ಮದಿ ತಂದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಇಂದಿನ ಪ್ರಕಟಣೆಯ ಪ್ರಕಾರ ಹಾಸನ-21 ಪ್ರಕರಣಗಳು ಕಂಡು ಬಂದಿದೆ. ಇದು ರಾಜ್ಯದಲ್ಲಿ ಇಂದು ಕಂಡು ಬಂದ ಅತಿ ಹೆಚ್ಚು ಪ್ರಕರಣ ಎಂದು ಹೇಳಬಹುದಾಗಿದೆ. ಇನ್ನು ಮಂಡ್ಯ, ಯಾದಗಿರಿ, ಬೆಂಗಳೂರು, ಉಡುಪಿ ತುಮಕೂರುಗಳಲ್ಲಿ ಪ್ರಕರಣಗಳು ಕಂಡು ಬಂದಿವೆ. ಬೆಳಗಾವಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟಾರೆ ಒಟ್ಟು 116 ಪ್ರಕರಣಗಳು ದೃಢಪಟ್ಟಿವೆ.

Read All News