ಬೆಳಗಾವಿ :ಮಹಾಂತೇಶ ನಗರದಲ್ಲಿ ಎಲ್ ಆ್ಯಂಡ್ ಟಿ ಕಂಪನಿ ಮಾಡುತ್ತಿರುವ ಕಾಮಗಾರಿಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹಳೆ ನೀರಿನ ಪೈಪ್ ಲೈನ್ ತೆಗೆದು ಹೊಸ ಪೈಪ್ ಲೈನ ನಿರ್ಮಾಣದ ಕಾಮಗಾರಿಗೆಂದು ತೆಗೆದು ತಗ್ಗು ಮುಚ್ಚದೆ ಹಾಗೆ ಬಿಟ್ಟಿರುವುದು ಇಲ್ಲಿನ ಜನರಿಗೆ ಸಂಚಾರ ನಡೆಸುವುದು ದುಸ್ಥರವಾಗಿದೆ. ಸಂಬಂಧಿಸಿದ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೆ ಇದು ಎಲ್ ಆ್ಯಂಡ್ ಟಿ ಕಂಪನಿಗೆ ವಹಿಸಲಾಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಸಾರ್ವಜನಿಕರು ಮಾತ್ರ ನರಕಯಾತನೆ ಅನುಭವಿಸುವಂತಾಗಿದೆ ಎಂದು ಇಲ್ಲಿನ ಜನರು ಅಸಮಾಧಾನ ಹೊರ ಹಾಕುತ್ತಿದ್ದಾರೆ.ಕಲುಷಿತ ನೀರು ಹಾಗೂ 8-10 ದಿನಕ್ಕೊಮ್ಮೆ ಕಡಿಮೆ ಅವಧಿಗೆ ನೀರು ಸರಬರಾಜು ಆಗುತ್ತಿರುವುದರಿಂದ ಚುನಾಯಿಸಿ ಕಳುಹಿಸಿದ ಮತದಾರರು ಪ್ರತಿದಿನ ಮನೆಗೆ ಬಂದು ಹಿಡಿಶಾಪ ಹಾಕುತ್ತಿದ್ದಾರೆ. ಅಳಲು ತೋಡಿಕೊಳ್ಳುತ್ತಿದ್ದಾರೆ. ಸಮಸ್ಯೆಯನ್ನು ತಕ್ಷಣ ಬಗೆ ಹರಿಸಲು ಪಾಲಿಕೆ ಚುನಾಯಿತ ಪ್ರತಿನಿಧಿಗಳು ಇದ್ದರೂ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಇಲ್ಲಿನ ಸಾರ್ವಜನಿಕರು ದೂರಿದ್ದಾರೆ.