ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗುರುರಾಜ್ ಪೂಜಾರಿ ಪುರುಷರ 61 ಕೆಜಿ ತೂಕದ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಇದು ಭಾರತಕ್ಕೆ ಎರಡನೇ ಪದಕವಾಗಿದೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಪಿ.ಗುರುರಾಜ ಅವರಿಗೆ ಅಭಿನಂದನೆಗಳು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತವನ್ನು ಮತ್ತೊಮ್ಮೆ ಹೆಮ್ಮೆ ಪಡುವಂತೆ ಮಾಡಿದ್ದೀರಿ. ಇಂತಹ ಇನ್ನೂ ಹಲವು ಸ್ಪೂರ್ತಿದಾಯಕ ಸಾಧನೆಗಳಿಗೆ ನನ್ನ ಶುಭಾಶಯಗಳು ಎಂದು ರಾಷ್ಟ್ರಪತಿಗಳು ಟ್ವೀಟ್ ಮುಲಕ ಶುಭಾಶಯ್ ತಿಳಿಸಿದ್ದಾರೆ.
Congratulations to P. Gururaja for winning the bronze medal in Weightlifting at #CommonwealthGames. You have made India proud once again at Commonwealth Games. My best wishes for many more such inspiring feats.
— President of India (@rashtrapatibhvn) July 30, 2022
ಪಿ.ಗುರುರಾಜರ ಸಾಧನೆಗೆ ಅತೀವ ಸಂತಸ! ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರು ಉತ್ತಮ ಸ್ಥಿತಿಸ್ಥಾಪಕತ್ವ ಮತ್ತು ನಿರ್ಣಯವನ್ನು ಪ್ರದರ್ಶಿಸಿದರು. ಅವರ ಕ್ರೀಡಾ ಪಯಣದಲ್ಲಿ ಇನ್ನೂ ಹಲವು ಮೈಲಿಗಲ್ಲುಗಳು ಮೂಡಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ .
Overjoyed by the accomplishment of P. Gururaja! Congratulations to him for winning the Bronze at the Commonwealth Games. He demonstrated great resilience and determination. I wish him many more milestones in his sporting journey. pic.twitter.com/i04Fv2owtW
— Narendra Modi (@narendramodi) July 30, 2022