ಹುಕ್ಕೇರಿ: ಈ ಭಾರಿಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಹುಕ್ಕೇರಿ ತಾಲ್ಲೂಕಿನ ಅರ್ಜುನವಾಡ ಗ್ರಾಮದ ಸರಕಾರಿ ಪ್ರೌಢ ಶಾಲೆ ಪ್ರತಿ ವರ್ಷ ನೂರಕ್ಕೆ ನೂರರಷ್ಟು ಎಸ್‍ಎಸ್‍ಎಲ್‍ಸಿ ಯಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟಿದೆ. ಈ ಬಾರಿಯು ಗ್ರಾಮದ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಧನೆಗೈದಿದ್ದಾರೆ. ರ್ಯಾಂಕ್ ಪಡೆದ ಗ್ರಾಮದ ಲಕ್ಷ್ಮೀ ದಡ್ಡಿ 95.52%, ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ, ಅನುರಾಗ ದೇಸಾಯಿ 91.04% ದ್ವೀತಿಯ, ಸುದಾ ಕರಬಸ್ಸಿ 90.72% ತೃತೀಯ ಸ್ಥಾನ ಪಡೆದಿದ್ದಾರೆ. ಪ್ರತಿ ವರ್ಷ ತಾಲೂಕಿನಲ್ಲಿ ಉತ್ತಮ ಫಲಿತಾಂಶ ತೆಗೆಯುವಲ್ಲಿ ಅರ್ಜುನವಾಡ ಶಾಲೆ ಮುಂಚುನಿಯಲ್ಲಿದೆ ಹಾಗೂ ಈ ಬಾರಿ ವಿದ್ಯಾರ್ಥಿಗಳು ಇಡೀ ಶಾಲೆಗೆ ಹೆಮ್ಮೆ ತಂದಿದ್ದಾರೆ ಈ ಸಾಧನೆಗೆ ಗ್ರಾಮದ ಜನರು ಸಂತೋಷ ವ್ಯಕ್ತಪಡಿಸಿದ್ದಾರೆ. ಸರಕಾರಿ ಪ್ರೌಢ ಶಾಲೆ ಆಡಳಿತ ಮಂಡಳಿ,ಮುಖ್ಯೋಪಾಧ್ಯಾಯರು, ಎಸಡಿಎಮ್‌ಸಿ ಅಧ್ಯಕ್ಷರು ಹಾಗೂ ಸದಸ್ಯರು, ಶಿಕ್ಷಕವೃಂದ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.