ವಿಜಯಪುರ : ಚಡಚಣ ತಾಲೂಕಿನ ಧುಮಕನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ (ಹಂಚು) ಕುಸಿದಿದ್ದು, ಹಲವು ವರ್ಷಗಳಿಂದ ಕೆಲವೊಂದು ಭೋದನಾ ಕೋಣೆಗಳು ಸಂಪೂರ್ಣ ಶಿಥಿಲಗೊಂಡಿವೆ. ಇದರಿಂದ ಮೇಲ್ಛಾವಣಿಯು ಕುಸಿದಿವೆ ಅಂತಹ ಕೋಣೆಗಳಲ್ಲಿಯೇ ಶಿಕ್ಷಕರು ಪಾಠ ಮಾಡುವಂತಿದ್ದು ಮತ್ತು ವಿದ್ಯಾರ್ಥಿಗಳು ಕುಳಿತು ಪಾಠ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಪಾಡು ಯಾರು ಕೇಳದಂತಾಗಿದೆ. ಮೊದಲೆ ಭೋಧನಾ ಕೋಣೆಗಳು ಕೊರತೆ ಕಾಡುತ್ತಿದೆ ಅಂತದರಲ್ಲಿ ಇರುವ ಕೊನೆಯ ಮೇಲ್ಛಾವಣಿ ಕುಸಿದಿದೆ. ಇತ್ತ ಮಳೆ ಬಂದರೆ ಸಾಕು ಸಂಪೂರ್ಣ ಮಳೆ ನೀರು ಒಳ ನುಗ್ಗುತ್ತವೆ ಮತ್ತು ಸುಡು ಬೇಸಿಗೆಯಲ್ಲಿ ವಿದ್ಯಾರ್ಥಿಗಳು ಕುಳಿತು ಪಾಠ ಕೇಳಬೇಕಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ ಮೇಲ್ಛಾವಣಿ ಕುಸಿದು ಅದೆಷ್ಟೋ ದಿನಗಳು ಗತಿಸಿದರೂ ಕ್ಯಾರೆ ಅನ್ನದ ಅಧಿಕಾರಿಗಳ ನಿರ್ಲಕ್ಷ ಧೋರಣೆ ಸರಿಯಲ್ಲ. ದುರಂತ ಘಟನೆಗಳು ಸಂಭವಿಸುವ ಮುನ್ನ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಶಾಲೆಯ ದುರಸ್ತಿಯ ಬಗ್ಗೆ ಕ್ರಮಕೈಗೊಳ್ಳಬೇಕು.
ವರದಿ :ಮಲಿಕ್.ಎಲ್.ಜೆ