ಕೋರೊನಾ ಆತಂಕದ ಮದ್ಯೆ ಮಿಡತೆ ದಾಳಿಯ ಹಾವಳಿ, ರೈತರ ಬದುಕು ಅತಂತ್ರ

  • 19 Dec 2023 , 3:08 AM
  • Haveri
  • 106

ಹಾವೇರಿ: ಮತ್ತೆ ರಾಜ್ಯದಲ್ಲಿ ಮಿಡತೆ ಹಾವಳಿ ಶುರುವಾಗಿದೆ ಒಂದು ಕಡೆ ಕೊರೊನಾ ಮತ್ತೊಂದೆಡೆ ಪ್ರವಾಹದ ಆತಂಕದ ಮಧ್ಯ ಮಿಡತೆ ದಾಳಿಯಿಂದ ರೈತರು ಕಂಗೆಟ್ಟು ಹೊದ ಘಟನೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ಗೋವಿನ ಜೋಳದ ಹೊಲದಲ್ಲಿ ಮಿಡತೆಗಳ ಹಾವಳಿ ಹೆಚ್ಚಿದ್ದು, ಬೆಳೆ ಹಾಳಾಗುವ ಆತಂಕ ರೈತರಲ್ಲಿ ಎದುರಾಗಿದೆ. ಗ್ರಾಮದ ಕ್ವಾಟಿಗುಡ್ಡದ ಬಳಿ ರೈತ ಮಲ್ಲಪ್ಪ ಚನ್ನಬಸಪ್ಪ ಅಂಗಡಿ ಎಂಬುವರ 3 ಎಕರೆ ಹೊಲದಲ್ಲಿ ಎರಡು ದಿನಗಳಿಂದ ಮಿಡತೆಗಳ ಹಿಂಡು ದಾಳಿಯಿಟ್ಟಿದ್ದು, ಗೋವಿನ ಜೋಳದ ದಂಟು ತಿನ್ನುತ್ತಿವೆ. ಇದರಿಂದ ಎರಡೂ ತಿಂಗಳ ಬೆಳೆಯಾಗಿರುವ ಗೋವಿನ ಜೋಳದ ಫಸಲನ್ನು ಮಿಡತೆಗಳು ತಿನ್ನತೊಡಗಿವೆ. ಏಕಾಏಕಿ ದಿಡೀರಣೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿರುವ ಮಿಡತೆಗಳ ಹಿಂಡು ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಗ್ರಾಮದಲ್ಲಿ ಮಿಡತೆಗಳ ಸುದ್ದಿ ಹರಡುತ್ತಿದ್ದಂತೆ ರೈತರು ತಂಡೋಪ ತಂಡವಾಗಿ ರೈತನ ಹೊಲಕ್ಕೆ ತೆರಳಿ ವೀಕ್ಷಿಸುತ್ತಿದ್ದಾರೆ. ದೊಡ್ಡ ಗಾತ್ರದಲ್ಲಿರುವ ಮಿಡತೆಗಳು ಈ ಹಿಂದೆ ನಮ್ಮ ಬಾಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಎರಡು ದಿನಗಳ ಹಿಂದೆ ರಾತ್ರೋರಾತ್ರಿ ಎಲ್ಲಿಂದ ಬಂದವು..? ಎಂಬುದು ದೊಡ್ಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರೈತ ನಿಂಗಪ್ಪ ಅಗಡಿ ಮಾತನಾಡಿ, ಎರಡು ತಿಂಗಳಿಂದ ರೈತರು ಸಾಕಷ್ಟು ಹಣ ಖರ್ಚುಮಾಡಿ ಗೋವಿನ ಜೋಳದ ಬೆಳೆ ಬೆಳೆದಿದ್ದಾರೆ. ಇನ್ನೇನು ಒಂದು ತಿಂಗಳಲ್ಲಿ ಫಸಲು ಸಿಗುವ ನಿರೀಕ್ಷೆ ನಮಗಿದೆ. ಆದರೆ ಮಿಡತೆಗಳ ಹಿಂಡು ಕಂಡು ನಾವು ಆತಂಕದಲ್ಲಿ ಮಳುಗಿದ್ದೇವೆ. ಕೂಡಲೇ ಕೃಷಿ ವಿಜ್ಞಾನಿಗಳು, ಕೃಷಿ ಸಹಾಯಕ ನಿರ್ಧೇಶಕರು ರೈತರ ಹೊಲಕ್ಕೆ ಬೇಟಿ ನೀಡಿ, ಸೂಕ್ತ ಪರಿಹಾರ ಕಂಡುಹಿಡಿದು ರೈತರ ಬೆಳೆಯನ್ನು ರಕ್ಷಿಸುವಂತೆ ಆಗ್ರಹಿಸಿದ್ದಾರೆ.

Read All News