ಕಣ್ಮನ ಸೆಳೆಯುತ್ತಿವೆ ಕಾವೇರಿ ನದಿ ತೀರದ ಸೇತುವೆಗಳು

  • 19 Dec 2023 , 7:41 AM
  • Mysuru
  • 214

ಮೈಸೂರು: ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಹಳ್ಳ, ಕೊಳ್ಳಗಳು, ಚಿಕ್ಕ ಚಿಕ್ಕ ಜಲಪಾತಗಳು ನದಿಯ ಸ್ವರೂಪ ಪಡೆಯುತ್ತಿವೆ. ಅದರಲ್ಲೂ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯ ಹತ್ತಿರ ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದ ಇಲ್ಲಿನ ಜಲಪಾತ ಭಾರಿ ಮಳೆಯಿಂದಾಗಿ ತುಂಬಿ ಭೋರ್ಗರೆಯುತ್ತಿದೆ ಸೇತುವೆಗಳಲ್ಲಿ ನೀರು ಧುಮ್ಮಿಕ್ಕುತಿದ್ದು. ಈ ಸುಂದರ ದೃಶ್ಯವನ್ನು ನೋಡಲು ಜನರು ಆಗಮಿಸುತ್ತಿದ್ದು ಇಲ್ಲಿನ ಪ್ರಕೃತಿಯಿಂದ ಭೇಟಿ ನೀಡುವವರ ಹೃದಯವನ್ನು ಈ ಚುಂಚನಕಟ್ಟೆಯ ಪಾಲ್ಸ್ ಹಾಗೂ ಸೇತುವೆಗಳು ಕದಿಯುತ್ತಿವೆ.

<center>

<video class="embed-responsive"  width="600" height="250"  controls="controls"><source src="https://localview.in/news/artipics/flood/lvkaveri.mp4" load="lazy"></video>
  </center>
 

ಬಲ್ಲೂರು ಕಟ್ಟೆಯಿಂದ ನೀರು ಜಲಪಿಸುತಿದ್ದು ಆ ದೃಶ್ಯ ನಯನ ಮನೋಹರವಾಗಿದೆ ಈ ಚುಂಚನಕಟ್ಟೆ ಜಲಪಾತ ಕರ್ನಾಟಕದ ಏಳನೇ ದೊಡ್ಡ ಜಲಪಾತವಾಗಿ ಹೊರಹೊಮ್ಮಿದೆ. ಜೊತೆಗೆ ಕಾವೇರಿ ನದಿಯ ಜಲಾಶಯಕ್ಕೆ ಹೊಂದಿಕೊಂಡ ಬಳ್ಳುರು ಕಟ್ಟೆ ಅಥವಾ ಸಕ್ಕರೆ ಕಟ್ಟೆ ಎಂದು ಹೆಸರು ಪಡೆದ ಈ ಜಲಾಶಯ ಉಕ್ಕಿ ಹರಿಯುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ವಿಶೇಷ ಎಂದರೆ ಇದು 180 ಡಿಗ್ರಿ ಆಕಾರದಲ್ಲಿ ಇದುದ್ದರಿಂದ ಇದನ್ನು ಸಕ್ಕರೆ ಕಟ್ಟೆ ಎಂದು ಕರೆಯಲಾಗುತ್ತಿದೆ.

ವರದಿ: ಸೋಮಶೇಖರ ಜೇ. ಗೌಡ, 
ಚಪ್ಪರದಹಳ್ಳಿ.

Read All News