ತ್ರಿಮೂರ್ತಿಗಳ ಕುಸ್ತಿ ಬಾಳಿಕಾಯಿ ಕುಸ್ತಿ ಆಗಬಾರದು: ಸತೀಶ್ ಜಾರಕಿಹೊಳಿ

  • 14 Jan 2024 , 9:26 PM
  • Belagavi
  • 95
ಬೆಳಗಾವಿ: ಬಿಜೆಪಿ ಪಕ್ಷದಲ್ಲಿನ ಭಿನ್ನಮತದ ಮೇಲೆ ಮಧ್ಯಂತರ ಚುನಾವಣೆ ಬರುತ್ತೋ ಇಲ್ಲವೋ ಗೊತ್ತಾಗಲಿದೆ. ಉಮೇಶ್ ಕತ್ತಿ ಎಷ್ಟು ಧೈರ್ಯ ಮಾಡ್ತಾರೆ ಅದರ ಮೇಲೆ ಸರ್ಕಾರ ಡಿಪೆಂಡ್ ಆಗಲಿದೆ. ಉಮೇಶ್ ಕತ್ತಿ ಟೀಂ ಕುಸ್ತಿ ಹೇಗೆ ಹಿಡಿತಾರೆ ಅನ್ನೋದರ ಮೇಲೆ ಗೊತ್ತಾಗಲಿದೆ . ಸಣ್ಣ ಕುಸ್ತಿ ಹಿಡಿತಾರೋ ದೊಡ್ಡ ಕುಸ್ತಿ ಹಿಡಿತಾರೋ ಅನ್ನೋದರ ಮೇಲೆ ನಿಂತಿದೆ. ಚುನಾವಣೆ ಬಂದ ಬಳಿಕ ಈಕಡೆ ಶಾಸಕರು ಬರೋದು ಹೋಗುವುದು ಇರುತ್ತದೆ ಒಟ್ಟಾರೆ ಬಿಜೆಪಿಯಲ್ಲಿ ಕುಸ್ತಿ ಆರಂಭವಾಗಿದೆ . ಬರೀ ಸೆಡ್ಡು ಹೊಡೆದು ಬಾಳಿಕಾಯಿ ತಗೊಂಡು ಬಂದ್ರೆ . ತ್ರಿಮೂರ್ತಿಗಳ ಕುಸ್ತಿ ಬಾಳಿಕಾಯಿ ಕುಸ್ತಿ ಆಗಬಾರದು . ನಿಕಾಲಿ ಕುಸ್ತಿ ಹಿಡಿದು ಜೇಂಡಾ ಹಿಡಿದುಕೊಂಡು ಬರಬೇಕು . ಆಗ ಮಾತ್ರ ಮಧ್ಯಂತರ ಚುನಾವಣೆ ಬರಬಹುದು , ನಾಯಕತ್ವದ ಬದಲಾವಣೆ ಆಗಬಹುದು. ಕುಸ್ತಿ ಹಿಡಿಯುವವರ ಮೇಲೆ ನಿಂತಿದೆ ಬರೀ ಕುಸ್ತಿಯಲ್ಲಿ ಅಂಗಿ ಹರಿದುಕೊಂಡು ಬಂದ್ರೆ ಏನ್ ಪ್ರಯೋಜನವಿಲ್ಲ.ಬಿಜೆಪಿ ಬಂಡಾಯ ಶಾಸಕರ ನಿರ್ಧಾರವನ್ನು ನಾವು ಕಾಯ್ದು ನೋಡಬೇಕು . ಬಿಜೆಪಿ ಆಪರೇಷನ್ ಕಮಲ ಆಡಿದ್ದೇ ರಾಂಗ್ . ಬಿಜೆಪಿಯಲ್ಲಿ ಈಗ ಆಪರೇಷನ್ ಕಮಲದ ಸಮಸ್ಯೆ ಆರಂಭವಾಗಿದೆ . ಯಾವುದೇ ಪಕ್ಷದಲ್ಲಿ ಹೊರಗಿನವರಿಗೆ ಆದ್ಯತೆ ಕೊಟ್ಟರೆ ಸಮಸ್ಯೆ ಆಗುವುದು . ಸರ್ಕಾರದಲ್ಲಿ ವರ್ಗಾವಣೆ ನೇರವಾಗಿ ರಾಜ್ಯದಿಂದ ಆಗುತ್ತದೆ ಕತ್ತಿ ಬಂಡಾಯಕ್ಕೆ ಡಿಸಿಸಿ ಬ್ಯಾಂಕ್ ಚುನಾವಣೆಗು ಸಂಬದವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಎಂದು ಟೀಕಿಸಿದರು.

Read All News