ಬ್ಯಾಡಗಿ : ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ಸನ್ಮಾನಿಸಿದರು. ಪಟ್ಟಣದ ಸೆಂಟ್‍ಜಾನ್ ಪ್ರೌಢಶಾಲೆಯ ಮಹೇಂದ್ರದಾನ್ 607, ಬಿಎಎಸ್ ಪ್ರೌಢಶಾಲೆಯ ಚಂದನ ಮಠದ 606, ನೂತನ ಪ್ರೌಢಶಾಲೆಯ ಅಮೃತ ನಾಗನಗೌಡರ 602, ಸ್ಪಂದನ ಪ್ರೌಢಶಾಲೆ ಕದರಮಂಡಲಗಿ ಗೌರಮ್ಮ ಹೊಸಪೂಜಾರ 600 ಅಂಕಗಳಿಸಿದ್ದು, ತಾಲೂಕಾಢಳಿತ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸನ್ಮಾನಿಸಿದರು. ಈ ವೇಳೆ ತಹಸೀಲ್ದಾರ ಶರಣವ್ವ ಕಾರಿ, ಬಿಇಓ ಬಿ.ಕೆ.ರುದ್ರಮುನಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎ.ಬಿ. ಜಯಕುಮಾರ ಉಪಸ್ಥಿತರಿದ್ದರು.