ಬೆಳಗಾವಿಯಿಂದ ಉತ್ತರ ಪ್ರದೇಶದ ಗೋರಕಪುರಗೆ ಶ್ರಮಿಕ್ ರೈಲು ಮೂಲಕ ಪ್ರಯಾಣ ಬೆಳಸಿದ ಕಾರ್ಮಿಕರು
- 14 Jan 2024 , 9:38 PM
- Belagavi
- 133
ಬೆಳಗಾವಿ: ನಗರದ ರೈಲು ನಿಲ್ದಾಣದ ಮೂಲಕ ಉತ್ತರ ಪ್ರದೇಶದ ಗೋರಕಪುರಗೆ ಶ್ರಮಿಕ್ ರೈಲು ಮೂಲಕ ಪ್ರಯಾಣ ಬೆಳಸಿದ ಸುಮಾರು 1700 ಕಾರ್ಮಿಕರಿಗೆ ಬಿಳ್ಕೊಡುವುದರ ಜೊತೆಗೆ ಕರ್ನಾಟಕ ಸರ್ಕಾರದಿಂದ ವಿತರಿಸಿದ ಆಹಾರ ಪಾಕೇಟ್ ಹಾಗೂ ನೀರಿನ ಬಾಟಲ್ ಗಳನ್ನು ಕೇಂದ್ರ ಸಚಿವ ಸುರೇಶ್ ಅಂಗಡಿ ವಿತರಿಸಿದರು. ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳ ಸತತ ಪರಿಶ್ರಮದಿಂದ ಈ ಕಾರ್ಯ ಸಾಧ್ಯವಾಗಿದೆ. ಗೋವಾದಿಂದ 229 ಹಾಗೂ ಕರ್ನಾಟಕದಿಂದ 1390 ಜನರು ಪ್ರಯಾಣ ಬೆಳೆಸಿದರು, ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ್ ಜಿ ಅವರು ಶ್ರಮಿಕರ ಬಗ್ಗೆ ವಿಶೇಷ ಕಾಳಜಿವಹಿಸಿದ್ದಾರೆ ಹಾಗೂ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎಲ್ಲ ಅಧಿಕಾರಿಗಳು ಉತ್ತಮ ಸಹಕಾರ ನೀಡಿದ್ದಾರೆ ಎಂದು ಹೇಳಿದ ಸುರೇಶ ಅಂಗಡಿ, ಕಾರ್ಮಿಕರು ಸಂತಸದಿಂದ ಪ್ರಯಾಣ ಬೆಳಸುವ ಮೂಲಕ, ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಅನಿಲ್ ಬೆನಕೆ, ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಶಿಕಾಂತ ಪಾಟೀಲ, ಮುಖಂಡರಾದ ರಾಜು ಚಿಕ್ಕನಗೌಡರ, ಮುರಗೇಂದ್ರ ಪಾಟೀಲ, ಜಿಲ್ಲಾಧಿಕಾರಿ ಡಾ. ಎಸ್ .ಬಿ. ಬೊಮ್ಮನಹಳ್ಳಿ, ಐಜಿಪಿ ರಾಘವೇಂದ್ರ ಸುಹಾಸ್, ಪೊಲೀಸ್ ಆಯುಕ್ತ ಲೋಕೇಶ್ ಕುಮಾರ, ಎಸ್.ಪಿ ಲಕ್ಷ್ಮಣ ನಿಂಬರಗಿ, ಡಿಸಿಪಿ ಶ್ರೀಮತಿ ಯಶೋಧಾ ವಂಟಗುಡಿ, ಡಿಎಚ್ಓ ಮುನ್ಯಾಳ , ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ ಸೇರಿದಂತೆ ಕೊರೋನಾ ವಾರಿಯರ್ಸ್ಗಳು, ರೈಲ್ವೆ ಅಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.