ಹಾವೇರಿ: ಜಿಲ್ಲಾ ನೂತನ ಬಿಜೆಪಿ ಉಪಾಧ್ಯಕ್ಷರಾಗಿ ಬ್ಯಾಡಗಿ ಪಟ್ಟಣದ ವೀರೇಂದ್ರ ಶೆಟ್ಟರರವರು ನೇಮಕ ಆಗಿದ್ದು ಮುಂದಿನ ಮೂರು ವರ್ಷಗಳ ಅವಧಿಗೆ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಈ ಬಗ್ಗೆ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಆದೇಶ ಹೊರಡಿಸಿದ್ದು ಪಕ್ಷದ ತತ್ವಸಿದ್ದಾಂತ, ಶಿಸ್ತನ್ನು ಅಳವಡಿಸಿಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡುವ ಮೂಲಕ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವಂತೆ ತಿಳಿಸಿದ್ದಾರೆ