ಬ್ಲಾಸ್ಟ್ ಆದ ಲಾರಿ ಟೈಯರ್, ಸ್ವಲ್ಪ ಹೊತ್ತು ಸಂಚಾರ ಅಸ್ತವ್ಯಸ್ತ

  • 15 Jan 2024 , 12:56 AM
  • Haveri
  • 199

ಹಾವೇರಿ : ಜಿಲ್ಲೆಯ ಬಂಕಾಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ-4ರ ಸ್ಮಶಾನದ ಹತ್ತಿರ ಚಲಿಸುತ್ತಿರುವ ಲಾರಿಯೊಂದರ ಟೈಯರ್ ಏಕಾಏಕಿ ಬ್ಲಾಸ್ಟ್ ಆದ ಘಟನೆ ಸೋಮವಾರ ಮದ್ಯರಾತ್ರಿ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ತಮಿಳುನಾಡು ರಾಜ್ಯಕ್ಕೆ ಸೇರಿದ ಲಾರಿಯೊಂದು ಗೋವಾದಿಂದ ಎಂ.ಆರ್.ಎಫ್. ಟಾಯರ್ ಕಚ್ಚಾ ವಸ್ತುಗಳನ್ನು ಹೇರಿಕೊಂಡು ತಮಿಳುನಾಡಿನ ಕಡೆಗೆ ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇದರಿಂದ ಒಂದು ಗಂಟೆಗೂ ಹೆಚ್ಚುಕಾಲ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹೊತ್ತಿ ಉರಿಯುತ್ತಿರುವ ಲಾರಿಯ ಬೆಂಕಿಯನ್ನು ಅರಿಸಿದರು, ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read All News