ಪಿಒಪಿ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿಕಾರಕ: ರೂಪಾ ನಾಯ್ಕ

  • 6 Jan 2024 , 3:25 AM
  • Haveri
  • 122

ಬಂಕಾಪುರ : ಪ್ರಸ್ತುತ ದಿನಗಳಲ್ಲಿ ಎಲ್ಲ ಕಡೆಗಳಲ್ಲಿಯೂ ಪಿಒಪಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳು ತಯಾರಿಸುತ್ತಾರೆ ಆದರೆ ಪ್ಲಾಸ್ಟರ್ ಗಣೇಶ ಮೂರ್ತಿಗಳಿಂದವ ಜಲದಲ್ಲಿ ನೈರ್ಮಲ್ಯ ವಾಗುತ್ತಿದೆ ಹಾಗೂ ನೀರು ಕಲುಷಿತ ವಾಗುತ್ತಿದೆ ಆದ್ದರಿಂದ ಇಂದು ಬಂಕಾಪುರ ಪಟ್ಟಣದಲ್ಲಿ ಪುರಸಭೆ ನೈರ್ಮಲ್ಯ ಅಧಿಕಾರಿ ರೂಪಾ ನಾಯ್ಕ ನೇತೃತ್ವದಲ್ಲಿ ಗಣೇಶ ಮೂರ್ತಿಗಳ ಮಾರಾಟ ಮಾಡದಂತೆ, ಗ್ರಾಹಕರು ಅವುಗಳನ್ನು ಖರೀದಿಸದಂತೆ ಮಾರಾಟಗಾರರು ಹಾಗು ಖರೀದಿದಾರರಲ್ಲಿ ಜಾಗೃತಿ ಮೂಡಿಸಿದರು.

ಪಟ್ಟಣದ ಕುಂಬಾರ ಓಣಿ, ಕುನ್ನೂರ ಚಿತ್ರಗಾರ ಗಣೇಶ ಮೂರ್ತಿ, ನಾರಾಯಣಪುರ, ಸದಾಶಿವಪೇಟೆಯ ಶ್ರೀ ಗಣೆಶ ಮೂರ್ತಿ ತಯಾರಕರು ಸೇರಿದಂತೆ ಪಟ್ಟಣಕ್ಕೆ ವಿವಿದ ಬಾಗಗಳಿಂದ ಮೂರ್ತಿ ಮಾರಾಟಕ್ಕೆ ಆಗಮಿಸಿದ ಮಳಿಗೆಗಳಿಗೆ ಬೇಟಿ ನೀಡಿ ಗಣೇಶ ಮೂರ್ತಿಗಳನ್ನು ಪರಿಶೀಲಿಸಿ ಮಾತನಾಡಿದ ಅವರು ಮೂರ್ತಿ ತಯಾರಕರು ಪರಿಸರಕ್ಕೇ ಮಾರಕವಾದ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುವ ಬದಲು ಪರಿಸರಕ್ಕೆ ಪುರಕವಾದ ಸರಾಗವಾಗಿ ನೀರಿನಲ್ಲಿ ಕರಗುವ ಮಣ್ಣು ಮತ್ತು ಗೋವುಗಳ ಶಗಣಿಗಳಿಂದ ತಯಾರಿಸಿದ ಮೂರ್ತಿಗಳನ್ನು ಮಾತ್ರ ಮಾರಾಟಮಾಡಬೇಕು. ಗ್ರಾಹಕರು ಕೂಡಾ ಮೂರ್ತಿಗಳ ಸುಂದರತೆಗೆ ಮಾರುಹೋಗಿ ಪಿಒಪಿ ಗಣೇಶ ಮೂರ್ತಿಗಳನ್ನು ಕೋಂಡು ಪರಿಸರವನ್ನು ಮಾಲಿನ್ಯಮಾಡದಂತೆ ಗ್ರಾಹಕರಲ್ಲಿ ಮನವಿ ಮಾಡಿದರು. ಪಿಒಪಿ ಗಣೇಶ ಮೂರ್ತಿಗಳನ್ನು ನೀವು ನೀರಿನಲ್ಲಿ ವಿಸರ್ಜಿಸಿದಾಗ ಅವು ಸರಾಗವಾಗಿ ನೀರಿನಲ್ಲಿ ಕರಗದೆ ಅವುಗಳಿಗೆ ಬಳಸಿದ ರಾಸಾಯನಿಕ ಬಣ್ಣ ನೀರಿನಲ್ಲಿ ಮಿಶ್ರಣಗೋಂಡು ಆ ನೀರನ್ನು ಸೇವಿಸುವ ಜಲ, ಚರ, ಪ್ರಾಣಿ, ಪಕ್ಷಿಗಳು ಸೇರಿದಂತೆ ಜನ, ಜಾನುವಾರಗಳ ಆರೋಗ್ಯದ ಮೇಲೆ ಬಹುದೋಡ್ಡ ದುಷ್ಠಪರಿಣಾಮಗಳು ಬೀರುತ್ತಲಿವೆ ಇದನ್ನು ತಡೆದು ಪರಿಸರ ಪ್ರೇಮಿಯಾಗಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳಾದ ಬಸಮ್ಮ ಕೊರಕಲ್, ಸುರೇಶ, ಎಚ್.ದೊಡ್ಡಮನಿ ಸೇರಿದಂತೆ ಸಾರ್ವಜನಿಕರು, ಗಣೇಶಮೂರ್ತಿ ಕಲಾವಿದರು ಉಪಸ್ಥಿತರಿದ್ದರು.

Read All News