ಹಾವೇರಿ: ರಾಣೇಬೆನ್ನೂರ ತಾಲೂಕಿನ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸ್ಥಳೀಯ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ನಗರದ ಕೋವಿಡ್ ಆಸ್ಪತ್ರೆಯ ರೋಗಿಗಳು ಸಮಯ ಕಳೆಯುವ ಸಲುವಾಗಿ ಒಳಾಂಗಣ ಆಟದ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ ಕಲ್ಯಾಣಿ ಅವರು ಮಾತನಾಡಿ ಕೋವಿಡ್ ಸೋಂಕಿತರನ್ನು ಗೌರವದಿಂದ ಕಾಣಬೇಕು ಅವರಲ್ಲಿ ಅಸ್ಪೃಶ್ಯ ಭಾವನೆ ಹೊಂದದೆ. ಚಿಕಿತ್ಸಾ ಸಮಯದಲ್ಲಿ ಕೋವಿಡ್ ರೋಗಿಗಳಿಗೆ ಮನರಂಜನೆಯನ್ನು ಒದಗಿಸಿ ಆತ್ಮಸ್ಥೈರ್ಯ ತುಂಬುವಂತೆ ಮಾಡುವುದು ತಮ್ಮ ಸಂಸ್ಥೆಯ ಉದ್ದೇಶವಾಗಿದೆ. ಆದ್ದರಿಂದ ಒಳಾಂಗಣ ಆಟದ ಸಾಮಗ್ರಿಗಳನ್ನು ಕೋವಿಡ್ ಸೋಕಿಂತರ ಅನುಕೂಲಕ್ಕೆ ನೀಡಲಾಗಿದೆ ಎಂದು ಹೇಳಿದರು. ಆಟದ ಸಾಮಗ್ರಿಗಳನ್ನು ಟಿಎಚ್‍ಒ ಡಾ.ಸಂತೋಷಕುಮಾರ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಡಾ.ಬಿ.ಎಸ್.ಕೇಲಗಾರ, ವೀರೇಶ ಹನಗೋಡಿಮಠ, ಜಿ.ಜಿ.ಹೊಟ್ಟಿಗೌಡ್ರ, ವೀರೇಶ ಮೋಟಗಿ, ಸುಧೀರ ಕುರವತ್ತಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು .