ರಾಣೇಬೆನ್ನೂರ ಕಾ ರಾಜಾ ಗಣಪತಿ ಈ ವರ್ಷ ಒಂದೇ ದಿ‌ನ ಮಾತ್ರ

  • 15 Jan 2024 , 1:11 AM
  • Haveri
  • 419

ಹಾವೇರಿ: ರಾಣೇಬೆನ್ನೂರ ನಗರದಲ್ಲಿ ಪ್ರತಿಷ್ಠಾಪಿಸಲಾಗುತ್ತಿದ್ದ ಪ್ರಸಿದ್ಧ ರಾಣೆಬೆನ್ನೂರ ಕಾ ರಾಜಾ ಗಣಪತಿಯನ್ನು ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಒಂದೇ ದಿನ ಮಾತ್ರ ಪ್ರತಿಷ್ಟಾಪನೆ ಮಾಡಲಾಗುವದು ಎಂದು ಸಂಘದ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಹೇಳಿದರು . ಈ ಕುರಿತು ಪ್ರತಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿವರ್ಷ ವಂದೇ ಮಾತರಂ ಸ್ವಯಂ ಸೇವಾ ಸಂಘದಿಂದ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗುತ್ತಿತ್ತು ಆದರೆ ಇತ್ತೀಚಿಗೆ ಸರ್ಕಾರ ಹೊರಡಿಸಿದ ನಿರ್ದೇಶನದಲ್ಲಿ ಸಾರ್ವಜನಿಕ ಗಣಪತಿಗೆ ಅವಕಾಶ ನೀಡಿದ್ದರಿಂದ ರಾಣೇಬೆನ್ನೂರುಕಾ ರಾಜ್ ಗಣೇಶ ಪ್ರತಿವರ್ಷದಂತೆ ಈ ವರ್ಷ ಕೂಡ 21 ದಿನಗಳು ರಾರಾಜಿಸಲಿದ್ದಾನೆ ಎಂದು ನಂಬಲಾಗಿತ್ತು ಈ ಎಲ್ಲಾ ಊಹಾಪೋಹ  ಮತ್ತು  ಸುಳ್ಳು ಸುದ್ದಿಗಳು ಹರಡುತ್ತಿದ್ದು ಯಾರು ಕೂಡ ಸುಳ್ಳು ಸುದ್ದಿಗಳಿಗೆ ಕಿವಿಕೊಡಬಾರದು ಗಣೇಶ ಒಂದೇ ದಿನ ಮಾತ್ರ ಕುರಿಸಲಾಗುವುದು. ಈ ಬಾರಿ ವಿಶೇಷವಾಗಿ 10 ಲಕ್ಷ ರೂ. ವೆಚ್ಚದಲ್ಲಿ 10 ಕೆ.ಜಿ. ತೂಕದ 24 ಇಂಚು ಬೆಳ್ಳಿಯ ಗಣಪತಿ ಮೂರ್ತಿ ಹಾಗೂ ಪೂಜಾ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದ್ದು. 5 ಲಕ್ಷ ವೆಚ್ಚದಲ್ಲಿ ಗಣೇಶ ಮಂಟಪವನ್ನು ಹೂವಿನ ಅಲಂಕಾರ ಹಾಗೂ ತೆಂಗಿನಗರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅಂದು ಬೆಳಗ್ಗೆ 8ಗಂಟೆ ಗಣೇಶನನ್ನು ಪ್ರತಿಷ್ಠಾಪಿಸಿ ರಾತ್ರಿ 11 ಗಂಟೆಗೆ ವಿಸರ್ಜಿಸಲಾಗುವುದು. ಆ ದಿವಸ ರಾತ್ರಿ 10.30 ರವರೆಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುತ್ತದೆ. ಯಾವುದೇ ಶುಲ್ಕವಿರುವುದಿಲ್ಲ ಉಚಿತ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಾತ್ರಿ ಯಾವುದೇ ಹರಾಜು ಪ್ರಕ್ರಿಯೆ, ಅನ್ನ ಸಂತರ್ಪಣೆ ಹಾಗೂ ಮೆರವಣಿಗೆ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Read All News