ಬ್ಯಾಡಗಿ: ರಾಜ್ಯದಲ್ಲಿ ಕೊರೊನಾದಿಂದ ಆರ್ಥಿಕ ವ್ಯವಸ್ಥೆ ಬಹಳ ಕುಸದಿದ್ದು ಇದರಿಂದ ಕಳೆದ ನಾಲ್ಕೈದು ತಿಂಗಳಿಂದ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದ್ದು, ಕೋವಿಡ್ ಹೆಸರಲ್ಲಿ ಬಿಜೆಪಿ ಸರ್ಕಾರ ಹಾಗೂ ಅಧಿಕಾರಿಗಳು ಕೋಟಿಗಟ್ಟಲೇ ಹಣ ಲೂಟಿ ಮಾಡುವ ಮೂಲಕ ಸಾರ್ವಜನಿಕರಿಗೆ ಸುಳ್ಳು ದಾಖಲೆಗಳನ್ನು ತೋರಿಸಿ ದೊಡ್ಡ ಮಟ್ಟದಲ್ಲಿ ಹಣ ಮಾಡುವ ದಂಧೆ ನಡೆಸಿದ್ದಾರೆ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿದ ಅವರು ಕೋವಿಡ್ ಹೆಸರಲ್ಲಿ ರಾಜ್ಯ ಸರ್ಕಾರ ಕೋಟಿಗಟ್ಟಲೆ ಹಣ ಲೂಟಿ ಮಾಡುತ್ತಿದೆ. ನೆರೆಹಾವಳಿ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಭೂಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ಜಾರಿಯಿಂದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೋವಿಡ್ ಕೇಂದ್ರದಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರಕದೆ, ಸಂಕಟ ಅನುಭವಿಸುತ್ತಿದ್ದರೂ ಸರ್ಕಾರ ಮೌನ ವಹಿಸಿದೆ ಎಂದು ಆರೋಪಿಸಿದರು.
ತಾಲೂಕು ಕಾಂಗ್ರೆಸ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕರಿಲಿಂಗಣ್ಣನವರ ಮಾತನಾಡಿ, ರೈತರ ಬೆಳೆಯನ್ನು ಎಪಿಎಂಸಿ ಮಾರುಕಟ್ಟೆಗೆ ತಂದು ಉತ್ತಮ ದರ ಪಡೆದುಕೊಳ್ಳುತ್ತಿದ್ದರು. ಟೆಂಡರನಲ್ಲಿ ಖರೀದಿದಾರರು ಹೆಚ್ಚಿನ ಬಿಡ್‍ನಿಂದ ರೈತರಿಗೆ ಲಾಭವಾಗುತ್ತಿತ್ತು. ಆನ್‍ಲೈನ ಖರೀದಿಯಿಂದ ಮೋಸವಿರಲಿಲ್ಲ, ಮುಕ್ತ ಮಾರುಕಟ್ಟೆಯ ತಿದ್ದುಪಡಿಯಿಂದ ರೈತರಿಗೆ ಮೋಸವಾದಲ್ಲಿ ಕೇಳೋರ್ಯಾರು..? ಮಾರುಕಟ್ಟೆಯಂತೆ ಹೊರಗಡೆ ಪೈಪೋಟಿ ಖರೀದಿದಾರರು ಸಿಗುವುದಿಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತವಿರೋಧಿ ನೀತಿಯಾಗಿದೆ. ಇಡಿ ರೈತಕುಲಕ್ಕೆ ಮಾರಕ ಕಾಯ್ದೆ ಎನ್ನಲಾಗುತ್ತಿದೆ ಎಂದರು. ಭೂಸುಧಾರಣೆ ಕಾಯ್ದೆಯಿಂದ ಭೂಗಳ್ಳರಿಗೆ, ಬಂಡವಾಳಶಾಹಿಗಳಿಗೆ ಹಾಗೂ ಉದ್ದಿಮೆದಾರರು, ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ಸರ್ಕಾರದ ಹುನ್ನಾರವಿದೆ. ಕಾಂಗ್ರೆಸ ಘಟದ, ಸರ್ಕಾರದಿಂದ ತಿದ್ದುಪಡಿ ವಾಪಸ್ಸು ಪಡೆಯುವರೆಗೂ ನಿರಂತರ ಹೋರಾಟ ನಡೆಸಲಿದೆ ಹೇಳಿದರು. ಪ್ರತಿಭಟನೆಯಲ್ಲಿ ಜಿ.ಪಂ.ಸದಸ್ಯ ಅಬ್ದುಲ್‍ಮುನಾಫ ಎಲಿಗಾರ, ಪ್ರಧಾನ ಕಾರ್ಯದರ್ಶಿ ರಮೇಶ ಸುತ್ತಕೋಟಿ, ಶಂಕರಗೌಡ್ರ ಪಾಟೀಲ, ಮಂಜುನಾಥ ಲಿಂಗನಗೌಡ್ರ, ಎ.ಎ.ಸವಣೂರು, ಶಂಕರ ಕುಸಗೂರು, ಮಾಲತೇಶ ಉಪ್ಪಾರ, ರಮೇಶ ಎಂ. ಎ.ಎ.ಸೌದಾಗರ, ಮಂಜುನಾಥ ಬೋವಿ, ದುರ್ಗೆಶ ಗೋಣೆ, ಮತ್ತಿತರರು ಉಪಸ್ಥಿತರಿದ್ದರು.