ಕೋರೊನಾ ಆತಂಕದ ನಡುವೆ ಗಣೇಶ ಉತ್ಸವಕ್ಕೆ ಸಜ್ಜಾದ ಕುಂದಾನಗರಿ

  • 14 Jan 2024 , 11:37 PM
  • Belagavi
  • 251

ಬೆಳಗಾವಿ: ಗಣೇಶ ಹಬ್ಬಕ್ಕೆ ಇನ್ನು ಒಂದೇ ದಿನ ಭಾಕಿ ಇದೆ. ಕುಂದಾನಗರಿಯಲ್ಲಿ ಗೌರಿನ್, ಗಣೇಶ ಚತುರ್ಥಿ ಸಂಬಂಧ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ, ವಹಿವಾಟು ನಡೆಯುತ್ತಿದೆ.

ಕೊರೋನಾ ಭೀತಿಯ ನಡುವೆ ಜಿಟಿ ಜಿಟಿ ಮಳೆಯಲ್ಲಿ ಗಣೇಶ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಮಕ್ಕಳು ಸೇರಿ ಇಡೀ ಕುಟುಂಬಸ್ಥರ ಜೊತೆ ಮನೆಯಿಂದ ಬಂದು ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.ಈ ಭಾರಿ ಮಣ್ಣಿನ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿದ್ದು, ಹೂವು, ಹಣ್ಣು, ಪಟಾಕಿ ಸೇರಿದಂತೆ ಇತರ ವಸ್ತುಗಳ ಬೆಲೆಯಲ್ಲಿ ಏರಿಕೆಯಾದರು ಜನರು ಮಾತ್ರ ಉತ್ಸಾಹದಿಂದಲೇ ಖರೀದಿಯಲ್ಲಿ ತೊಡಗಿದ್ದಾರೆ. ಕೊರೊನಾ ಸಂಕಷ್ಟದಲ್ಲಿಯೂ ಕೂಡಾ ಸಿದ್ಧಿ ವಿನಾಯಕನನ್ನು ಮನೆಗೆ ಬರಮಾಡಿಕೊಳ್ಳಲು ತಳಿರು ತೋರಣ ಕಟ್ಟಿ ಸಿಂಗರಿಸುವ ಮೂಲಕ ಮನೆ ಮಂದಿಯಲ್ಲಾ ಮಗ್ನರಾಗಿದ್ದಾರೆ.

ಶ್ರೀ ಗಣೇಶನ ಭಕ್ತಿಯಲ್ಲಿ ಪರವಶರಾದ ಭಕ್ತರು ಕೊರೊನಾ ಭಯದ ಬೀತಿಯನ್ನು ಮರೆತು, ಬೆಲೆ ಏರಿಕೆಯ ಮದ್ಯದಲ್ಲಿಯೂ ಕೂಡಾ ಸಂಭ್ರಮದ ಹಬ್ಬದ ಆಚರಣೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸುವಲ್ಲಿ ತಲ್ಲಿನರಾಗಿದ್ದಾರೆ.

ಕೊರೊನಾ ಮಾಹಾಮಾರಿಯಿಂದ ಎಲ್ಲದರ ಬೆಲೆಗಳು ಗಗನಕ್ಕೆ ಏರಿದ್ದು ಅದರ ಬೆಲೆಗಳು ಈ ಕೆಳಗಿನಂತೆ ಇವೆ ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಇತರೆ ಹೂವಿನ ಬೆಲೆಗಳು ಹಿಂದಿನ ಬೆಲೆಗಿಂತ 20 ರಿಂದ 30 ಕ್ಕೆ ಏರಿದೆ. ಹೂವಿನ ಬೆಲೆ ದ್ವಿಗುಣವಾಗಿತ್ತು. ಮಲ್ಲಿಗೆ, ಕನಕಾಂಬರ, 40 ರೂ.ನಿಂದ 50 ರೂ. ಆಗಿದೆ ಸೇವಂತಿಗೆಯೂ 30 ರಿಂದ 40 ರೂ. ಆಗಿದೆ ವ್ಯಾಪಾರಸ್ಥರು ಅದರಲ್ಲು ನಗರದಲ್ಲಿ ವ್ಯಾಪಾರ ವಹಿವಾಟ ಜೋರಾಗಿಯೆ ನಡೆಯುತ್ತಿದೆ.

Read All News