ಪ್ರಸಿದ್ಧ ಬಂಕಾಪುರ ಹಿಂದೂ ಮಹಾರಾಜ ಗಣಪತಿ ಈ ಬಾರಿ ಅತೀ ಸರಳವಾಗಿ ಪ್ರತಿಷ್ಟಾಪಿಸಲಾಯಿತು

  • 15 Jan 2024 , 1:26 AM
  • Haveri
  • 162

ಬಂಕಾಪುರ : ಪಟ್ಟಣದ ಬಸ್ ಸ್ಟ್ಯಾಂಡಹತ್ತಿರ ನೆಹರು ಗಾರ್ಡನ್‍ನಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾ ಗಣಪತಿ ಮೂರ್ತಿಯನ್ನು ಶನಿವಾರ ಕೊರೊನಾ ನಿಮಿತ್ತ ಸರಳವಾಗಿ ಸ್ವಾಗತಿಸಿ ಶ್ರದ್ಧಾ, ಭಕ್ತಿಯಿಂದ ಪೂಜಿಸಿ ನಮನ ಸಲ್ಲಿಸಿದರು. ಆದರದ ಅತಿಥಿ ಶ್ರೀ ಗಣೇಶ ಮೂರ್ತಿಯನ್ನು ಭಕ್ತಿ ಬಾವದಿಂದ ಮನೆ, ಮನಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಿ, ಬೃಷ್ಠಾನ್ನ ಬೋಜನ ತಯಾರಿಸಿ ಶ್ರೀ ಗಣೇಶನಿಗೆ ನೈವೆದ್ಯ ಸಮರ್ಪಿಸಿ ಕುಟುಂಬ ಪರಿವಾರದವರು ಇಷ್ಠಾರ್ಥ ಸಿದ್ದಿಗಾಗಿ ಬೇಡಿಕೋಂಡು, ಸಹಬೋಜನ ಸವಿದು ಸಂಭ್ರಮಿಸಿದರು. ಈ ಬಾರಿ ಪಟ್ಟಣದ ವಿವಿದ ಬಾಗಗಳಲ್ಲಿ ಸುಮಾರು 25 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಕೊರೊನಾ ವೈರಸ್ ಹಿನ್ನಲೆಯಲ್ಲಿ ಆದೇಶದಂತೆ ಗಣೇಶ ಮಂಡಳಿಯವರು ಅತೀ ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಲಾಯಿತು ಈ ಬಾರಿ ಸಾರ್ವಜನಿಕ ಗಣೇಶ ಅಡಂಬರದ ಪ್ರತಿಷ್ಠಾಪನೆಗೆ ಸರಕಾರ ಕಡಿವಾಣ ಹಾಕಿರುವುದರಿಂದ ಶಾಮಿಯಾನದವರು ಹಾನಿ ಅನುಬವಿಸುವಂತಾಗಿದೆ. ಸರಕಾರ ಶಾಮಿಯಾನ ಮಾಲಕರಿಗೆ ಅಪರಿಹಾರದ ಹಣ ಘೋಸಿಸಬೇಕು ಎಂದು ಸಿದ್ದಯ್ಯ ಗೌರಿಮಠ ನಾಗವೇಣಿ ಸೌಂಡ ಸಿಸ್ಟಮ್ ಮಾಲಕರು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಪಿ.ಎಸ್.ಐ. ಸಂತೋಷ ಪಾಟೀಲ, ಮಂಜುನಾಥ ಲಮಾಣಿ, ಹಿಂದು ಮಹಾಸಬಾ ಮಂಡಳಿ ಅಧ್ಯಕ್ಷ ಈರಣ್ಣ ಬಳಿಗಾರ, ಸೋಮಶೇಖರ ಗೌರಿಮಠ, ಶಿವಾನಂದ ದೇವಸೂರ, ರಾಘವೇಂದ್ರ ಮೇಲಗಿರಿ, ನಿಂಗಪ್ಪ ಹೊಸಮನಿ, ಹೊನ್ನಪ್ಪ ಹೂಗಾರ, ಗುಡ್ಡಪ್ಪ ಮತ್ತೂರ, ಚಂದ್ರು ಕರಿಗೌಡ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read All News