ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ಮತ್ತು ಹಂಸಬಾವಿ ಗ್ರಾಮಗಳಲ್ಲಿ ಕಳೆದ ವರ್ಷ ಹಾಗೂ 2011 ರಲ್ಲಿ ನಡೆದ ಗಣೇಶೋತ್ಸವ ಮೂರ್ತಿ ವಿಸರ್ಜನೆ ವೇಳೆ ಪೋಲಿಸರು ಹಾಗೂ ಸಾರ್ವಜನಿಕರ ನಡುವೆ ಸಂಘರ್ಷ ಏರ್ಪಟ್ಟಿದ ಈ ಪ್ರಕರಣ ಸಂಬಂದಿಸಿದಂತೆ 2019 ರಲ್ಲಿ ಹಂಸಬಾವಿಯಲ್ಲಿ 11 ಮಂದಿ ಹಾಗೂ 2011 ರಲ್ಲಿ ರಟ್ಟಿಹಳ್ಳಿಯಲ್ಲಿ 46 ಜನರ ಮೇಲೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಇದೀಗ ಎರಡು ಠಾಣೆಗಳಲ್ಲಿರುವ ಸಾರ್ವಜನಿಕರ ಮೇಲಿನ ಪ್ರಕರಣಗಳನ್ನು ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಿಂಪಡೆಯಲಾಗಿದೆ ನ್ಯಾಯಾಲಯಕ್ಕೆ ಓಡಾಡುತ್ತಿದ್ದ ಸಾರ್ವಜನಿಕರಿಗೆ ಮುಕ್ತಿದೊರೆತಂತಾಗಿದೆ.ಈ ಪ್ರಕರಣವನ್ನು ಹಿಂಪಡೆದದ್ದಕ್ಕೆ ಕ್ಷೇತ್ರದ ಜನತೆ ಹಾಗೂ ಬಿಜೆಪಿ ಘಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ್ ಅವರುಗಳಿಗೆ ಕೃತಜ್ಞತೆ ಅರ್ಪಿಸಿದರು.