ಸ್ಥಳಕ್ಕೆ ಸಿಎಂ ಬರುವಂತೆ ಪಟ್ಟು ಹಿಡಿದ ಅನ್ನದಾತರು

  • 15 Jan 2024 , 6:09 AM
  • Belagavi
  • 164

ರಾಮದುರ್ಗ: ತಹಶಿಲ್ದಾರರ ಕಚೇರಿ ಮುಂದೆ ಧರಣಿಗೆ ಕುಳಿತ ರೈತರು, ಸ್ಥಳಕ್ಕೆ ಸಿಎಂ ಬರುವಂತೆ ಪಟ್ಟು ಹಿಡಿದು ತಾಲೂಕಿನ ಹಿರೇ ಹಂಪಿಹೊಳಿ, ಅವರಾದಿ, ಸುರೇಬಾನ, ಸುನ್ನಾಳ, ಸೇರಿದಂತೆ ವಿವಿಧ ಗ್ರಾಮಗಳ ನೆರೆ ಸಂತ್ರಸ್ತರಿಂದ ಧರಣಿ. ಪಶ್ಚಿಮಘಟ್ಟ ಮಹಾರಾಷ್ಟ್ರ ಭಾಗದಲ್ಲಿ ಅತಿ ಹೆಚ್ಚು ಸುರಿದ ಮಳೆಯಿಂದಾಗಿ ರಾಮದುರ್ಗ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಪ್ರವಾಹದಿಂದ ನೂರಾರು ಮನೆಗಳು ಸಂಪೂರ್ಣ ಜಲಾವೃತಗೊಂಡು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಕಳೆದ ವರ್ಷ ಕೂಡ ಇಂತಹ ಪರಿಸ್ಥಿತಿಯಿಂದ ಜನರ ಜೀವ ಉಳಿದಿರುವುದೇ ಹೆಚ್ಚು. ಅಂತದ್ರಲ್ಲಿ ಈ ವರ್ಷವೂ ಕೂಡ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸ್ಥಳೀಯ ಅಧಿಕಾರಿಗಳಿಗೆ, ಜಿಲ್ಲಾಡಳಿತಕ್ಕೆ ಇದರ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿಯ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ್ದೇವು.

ಆವತ್ತಿನ ಜಿಲ್ಲಾಧಿಕಾರಿಗಳು ಅತೀ ಶೀಘ್ರದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಒದಗಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇನ್ನುವರೆಗೂ ಸೂಕ್ತ ಪರಿಹಾರ ದೊರೆತಿಲ್ಲ. ಅದರಿಂದ ಇಲ್ಲಿಯ ಜನ ರೊಚ್ಚಿಗೆದ್ದು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡ ಜನರು, ಹಾಗೂ ರೈತರು, ಇಂದು ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ಬಂದ ಸಿಎಂ ಅವರಿಂದ ಏನಾದರೂ ಸೂಕ್ತ ಪರಿಹಾರ ದೊರೆಯಬಹುದೆಂಬ ಕಾರಣದಿಂದ ಸ್ಥಳಕ್ಕೆ ಸಿಎಂ ಬರುವಂತೆ ಪಟ್ಟು ಹಿಡಿದಿದ್ದಾರೆ.

Read All News