ಯು.ಬಿ.ಬಣಕಾರ್ ಜೊತೆ ಬಾಗಿನ ಅರ್ಪಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

  • 15 Jan 2024 , 3:54 AM
  • Haveri
  • 106

ಹಾವೇರಿ: ಇದೇ ಮೊದಲ ಯು.ಬಿ.ಬಣಕಾರ್ ಜೊತೆ ಕೃಷಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಬಿ.ಸಿ.ಪಾಟೀಲ್ ಇಬ್ಬರೂ ಸೇರಿ ಹಿರೇಕೆರೂರಿನ "ಮದಗಮಾಸೂರು ಕೆರೆ" ( ಕೆಂಚಮ್ಮನ ಕೆರೆ)ಗೆ ಬಾಗಿನ ಅರ್ಪಿಸಿದರು.

ಐತಿಹಾಸಿಕ ಪ್ರಸಿದ್ಧ ರಟ್ಟಿಹಳ್ಳಿ -ಹಿರೇಕೆರೂರಿನ "ಮದಗಮಾಸೂರು ಕೆರೆ"( ಕೆಂಚಮ್ಮನ ಕೆರೆ)ಗೆ ಬಾಗಿನ ಅರ್ಪಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಾಗಿನ ಅರ್ಪಿಸಿರುವುದು ವಿಶೇಷ ಹಾಗೂ ಪುಣ್ಯದ ಕೆಲಸ‌. ಕೆರೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಇಬ್ಬರೂ ಶ್ರಮಿಸುವುದಾಗಿ ಎಂದು ಹೇಳಿದರು.

2018-19 ಸಾಲಿನಲ್ಲಿ ಎಡಬಲದಂಡೆಗೆ 25 ಕೋಟಿ ರೂ. ಅಭಿವೃದ್ಧಿಗೆಂದೇ ಇಡಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಹಣದ ಕೊರತೆಯಾಗಿದೆ. ಎಡಬಲ ದಂಡೆಗಳನ್ನು ನವೀಕರಿಸಿ, ಕೆರೆಯನ್ನು ಅಭಿವೃದ್ಧಿ ಮಾಡಿ ಕ್ಷೇತ್ರದ ರೈತರು ಹಾಗೂ ಜನತೆಗೆ ಅನುಕೂಲ ಕಲ್ಪಿಸಲಾಗುವುದು ಎಂದರು. ಪ್ರತಿವರ್ಷ ನಾನು ಹಾಗೂ ಯು.ಬಿ.ಬಣಕಾರ್ ಪ್ರತ್ಯೇಕವಾಗಿ ಬಾಗೀನ ಬಿಡುತ್ತಿದ್ದೆವು‌. ದೇವರ ದಯೆಯಿಂದ ಈ ಬಾರಿ ಕೃಷಿ ಸಚಿವನಾಗುವ ಸೌಭಾಗ್ಯ ದೊರೆತಿದೆ. ಈ ವರ್ಷ ಇಬ್ಬರೂ ಸೇರಿ ಕೆಂಚಮ್ಮನಕೆರೆಗೆ ಬಾಗಿನ ಅರ್ಪಿಸಿದ್ದೇವೆ. ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.

Read All News