ಗೊಬ್ಬಿ ಆಂಜನೇಯಸ್ವಾಮಿಗೆ ರೈತಸಮೂಹದಿಂದ ವಿಶೇಷ ಪೂಜೆ

  • 15 Jan 2024 , 5:04 AM
  • Haveri
  • 119
<strong>ಬಂಕಾಪುರ : </strong>ಮಹಾಮಾರಿ ಕೊರೊನಾ ವೈರಸ್ ತೊಲುಗಿಸಿ, ಸಂಕಷ್ಟದಿಂದ ಜನರನ್ನು ಪಾರುಮಾಡುವಂತೆ ಪಟ್ಟಣದ ಗೊಬ್ಬಿ ಆಂಜನೇಯಸ್ವಾಮಿಗೆ ರೈತಸಮೂಹ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಫಕ್ಕೀರಗೌಡ್ರ ಪಾಟೀಲ ನೂರಾರು ವರ್ಷಗಳ ಇತಿಹಾಸವುಳ್ಳ ಗೊಬ್ಬಿ ಆಂಜನೇಯಸ್ವಾಮಿಗೆ ಭಕ್ತಿಯಿಂದ ಬೇಡುವ ಭಕ್ತರ ಕಷ್ಟ, ಕಾರ್ಪಣ್ಯಗಳನ್ನು ದೂರಮಾಡುವ ಶಕ್ತಿ ಅಡಗಿದ್ದು, ಜಗತ್ತಿನಾದ್ಯಂತ ಮನುಕುಲಕ್ಕೆ ಆವರಿಸಿದ ಕೊರೊನಾ ವೈರಸ್ ಹಾವಳಿಯಿಂದ ರಕ್ಷಿಸುವಂತೆ ಪ್ರಾರ್ಥಿಸಿದರು. ರೈತಸಮೂಹ ಗೊಬ್ಬಿ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಕೈಗೋಂಡಿದ್ದು ಸ್ವಾಗತಾರ್ಹಕಾರ್ಯವಾಗಿದ್ದು ಈ ಕಾರ್ಯಕ್ಕೆ ನನ್ನ ಕಡೆಯಿಂದ ಅಲ್ಪಕಾಣಿಕೆ ನೀಡುವುದಾಗಿ ಹೇಳಿ 5 ಸಾವಿರ ರೂ ಗಳನ್ನು ದೇಣಿಗೆ ನೀಡಿದರು. ಗೊಬ್ಬಿ ಆಂಜನೇಯಸ್ವಾಮಿ ಸೇವಾ ಸಮಿತಿ ಸದಸ್ಯರಾದ ಸುರೇಶ ಕುರಗೋಡಿ, ಮಾಲತೇಶ ಸಕ್ರಿ, ಗದಿಗೆಪ್ಪಗೌಡ ಪಾಟೀಲ, ರವಿ ಕುರಗೋಡಿ, ರೇವಣಸಿದ್ದಪ್ಪ ಕುರಗೋಡಿ, ಶೇಕಪ್ಪ ತಳವಾರ, ಶಂಕರಗೌಡ್ರ ಪಾಟೀಲ, ಮಂಜುನಾಥ ವಳಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Read All News