ಸರಕಾರದ ಕಣ್ಣಾ ಮುಚ್ಚಾಲೆ ಆಟ, ನೆರೆ ಸಂತ್ರಸ್ತರ ಗೋಳಾಟ

  • 4 Jan 2024 , 12:39 PM
  • Belagavi
  • 186

ಬೆಳಗಾವಿ: ಮಲಪ್ರಭಾ ನದಿ ಪ್ರವಾಹದಿಂದ ಬಾಧಿತವಾದ ತಾಲೂಕಿನ ಸಾಕಷ್ಟು ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಸಂತ್ರಸ್ತರ ಅಹೋ ರಾತ್ರಿ ಧರಣಿ ಹಾಗೂ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ, ಅವರಾದಿ ಫಲಹಾರೇಶ್ವರ ಮಠದ ಶ್ರೀ ಶಿವಮೂರ್ತಿ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ರೈತ ಸಂಘ ಹಸಿರು ಸೇನೆ,ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯವರ ನೇತೃತ್ವದಲ್ಲಿ ಧರಣಿ ಮಾಡುತ್ತಿದ್ದಾರೆ .

ಈ ಸಂದರ್ಭದಲ್ಲಿ ಸಂತ್ರಸ್ತ ಮಹಿಳೆಯರು ತಮ್ಮ ಕಷ್ಟವನ್ನು ತೋಡಿಕೊಂಡು ಮಾತನಾಡಿ ಸರಕಾರ ಸಂತ್ರಸ್ತರ ಜೋಡಿ ಕಣ್ಣಾ ಮುಚ್ಚಾಲೆ ಆಟ ನಡಿಸಿದೆ ಎಂದು ಸರಕಾರಕ್ಕೆ ಹಿಡಿ ಶಾಪ ಹಾಕಿ ಆಕ್ರೋಶವನ್ನು ಹೊರ ಹಾಕಿ ಪ್ರವಾಹ ಬಂದು ನಮ್ಮ ಹೊಲದನ್ನು ಬೆಳೆ ಹೋಗ್ಯಾವ್ರಿ ಮನೆ ಬಿದ್ದಾ ವ್ರಿ ನಮ್ಮ ಹೊಟ್ಟಿ ಊರಿತೈತ್ರಿ, ನಮಗ ಬಾಳ ತ್ರಾಸ ಆಗೇತ್ರಿ ನಮ್ಮ ಗೋಳಾಟಕ್ಕ ಯಾವ ರಾಜಕಾರಣಿಗಳು, ಅಧಿಕಾರಿಗಳು ದಿಕ್ಕು ಇಲ್ಲದಂಗ ಆಗೇತ್ರೋ ಎಂದು ಬಾಯಿ ಬಾಯಿ ಬಡಕೊಂಡು ತಮ್ಮ ನೋವನ್ನು ಹೊರ ಹಾಕಿದ್ದಾರೆ. ಇದೆ ವೇಳೆ ಮತ್ತೊರ್ವ ಸಂತ್ರಸ್ತ ಕಣ್ಣೀರು ಹಾಕುತ್ತಾ ಮಾತನಾಡಿ ನಮ್ಮ ಕಬ್ಬು, ಗೋವಿನಜೋಳ ತೇಲಿ ಹೋಗೇತ್ರಿ ನಮ್ಮ ಮನೆ ಬಿದ್ದೆತ್ರಿ ಇದರ ಚಿಂತಿ ಹಚಕೊಂಡ ನಮ್ಮ ಅಪ್ಪ ಜೀವ ಬಿಟ್ರಿ ಎಂದು ಸಂತ್ರಸ್ತ ತಮ್ಮ ಅಳಲನ್ನು ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿದ.

ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ನೆರೆ ಸಂತ್ರಸ್ತರಿಗೆ ಪರಿಹಾರ ಮುಟ್ಟಿಸುವಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಸಂತ್ರಸ್ತರು ಧರಣಿಯನ್ನು ಮುಂದುವರೆಸಬಾರದು ಎಂದು ಮನವೊಲಿಸಲು ಮನವಿ ಮಾಡಿದರು.ಇದಕ್ಕೆ ಸಂತ್ರಸ್ತರು ನಮಗೆ ಪರಿಹಾರ ದೊರಕುವವರೆಗೆ ಧರಣಿ ಮುಂದುವರೆಸುತ್ತೇವೆ ಎಂದು ಹೇಳಿದರು.

Read All News