ಗಡಿನಾಡಿನ ಕನ್ನಡದ ಮೊದಲ ಮೇಯರ್ ಸಿದ್ದನಗೌಡ ಪಾಟೀಲ್ ಇನ್ನಿಲ್ಲ

  • 17 Dec 2023 , 10:11 PM
  • Belagavi
  • 112

ಬೆಳಗಾವಿ: ಗಡಿನಾಡು ಬೆಳಗಾವಿ ಮಹಾನಗರ ಪಾಲಿಕೆಯ ಮೊದಲ ಕನ್ನಡ ಮೇಯರ್ ಸಿದ್ದನಗೌಡ ಪಾಟೀಲ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದ ಅವರು ಮೃತರಿಗೆ 87 ವರ್ಷ ವಯಸ್ಸ ಆಗಿತ್ತು. ಇಳಿ ವಯಸ್ಸಿನಲ್ಲಿಯೂ ಬೆಳಗಾವಿಯ ಎಲ್ಲ ಕನ್ನಡ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಸಿದ್ದನಗೌಡ ಪಾಟೀಲರು ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿದ್ದವು. ಶ್ರೀಯುತರ ಅಂತ್ಯಕ್ರಿಯೆ ಇಂದು ಅವರ ಸ್ವಗ್ರಾಮ ನೇಸರಗಿ ಸಮೀಪದ ಮಲ್ಲಾಪುರದಲ್ಲಿ ನಡೆಯಲಿದೆ.

Read All News