ಹುಕ್ಕೇರಿ: ತಾಲೂಕಿನ ಮನಗುತ್ತಿ ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಸೇರಿದಂತೆ 5 ಮೂರ್ತಿಗಳ ಪ್ರತಿಷ್ಠಾಪನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿಯವರು ಅಡಿಗಲ್ಲು ಸಮಾರಂಭ ನಡೆಸಿದರು. ಇಂದು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದ ಶಾಸಕ ಸತೀಶ ಜಾರಕಿಹೊಳಿ ಮನಗುತ್ತಿ, ಬೋಳಶ್ಯಾನಟ್ಟಿ, ಬೆನಕನಹೊಳಿ ಗ್ರಾಮದ ಜನರು ಸಭೆ ನಡೆಸಿ ಬಸವಣ್ಣ ಗುಡಿ ಬಳಿ ಇರುವ ಶ್ರೀ ಲಕ್ಷ್ಮೀದೇವಿ ಹೊಲದಲ್ಲಿ ಶಿವಾಜಿ , ಬಸವಣ್ಣ, ವಾಲ್ಮೀಕಿ, ಗೌಳಿ ಕೃಷ್ಣ, ಮತ್ತು ಅಂಬೇಡ್ಕರ ಮೂರ್ತಿಗಳ ಪ್ರತಿಷ್ಠಾಪನೆಯ ಅಡಿಗಲ್ಲು ನೆರವೇರಿಸಿ ಮೂರ್ತಿ ಪ್ರತಿಷ್ಠಾಪನೆ ವಿವಾದಕ್ಕೆ ಅಂತ್ಯ ಹಾಕಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಾ.ಪಂ. ಸದಸ್ಯ ಸುರೇಶ ಬೆಣ್ಣಿ ಮೂರು ಗ್ರಾಮಗಳ ಮುಖಂಡರು ಸೇರಿ ಈ ನಿರ್ಧಾರ ಕೈಗೊಂಡಿದ್ದೇವೆ ಈ ಐದು ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತೇವೆ ನಾವು ಶಾಂತಿ ಸೌಹಾರ್ದತೆಯಿಂದ ಬದುಕುತ್ತೇವೆ. ಹೊರಗಿನ ಜನರು ಮಣಗುತ್ತಿ ಗ್ರಾಮಕ್ಕೆ ಬಂದು ಶಿವಾಜಿ ಮೂರ್ತಿ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ಬೆನಕನಹೊಳಿ ಗ್ರಾಮದ ಅರ್ಜುನ ಘಸ್ತಿ, ಬೋಳಶ್ಯಾನಟ್ಟಿಯ ರಮೇಶ ಭುಜಮಗೋಳ, ಮಣಗುತ್ತಿ ಗ್ರಾಮದ ಸುನೀಲ ಹುಕ್ಕೇರಿ, ಶಶಿ ಸಾವನ್ನವರ, ಶಂಕರ ಮಾದರ, ಪುಂಡಲೀಕ ಕೋಕಿತಕರ, ಲಕ್ಷ್ಮಣ ಕುರಾಡ, ಶರದ ಪಾಟೀಲ, ರಮೇಶ ಪಾಟೀಲ, ಮತ್ತು ಬಸವರಾಜ ಧರನಟ್ಟಿ ಸೇರಿದಂತೆ ಇತರರು ಹಾಜರಿದ್ದರು.