ದಿ.ನಾಗಪ್ಪ ಬೇವಿನಹಳ್ಳಿ ಕುಟುಂಬಕ್ಕೆ 25 ಸಾವಿರ ಸಹಾಯ ಧನ ನೀಡಿದ ಸಂತೋಷಭಟ್ಟ ಪೂಜಾರ

  • 15 Jan 2024 , 1:41 AM
  • Haveri
  • 122

ರಾಣೇಬೆನ್ನೂರ: ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ ದೇವಸ್ಥಾನದ ಪ್ರಧಾನ ಆರ್ಚಕ ಸಂತೋಷಭಟ್ಟ ಪೂಜಾರ ಅವರು ಗ್ರಾಮದ ಬೂಸಪ್ಪ ಬೇವಿನಹಳ್ಳಿ ಇತ್ತೀಚಿಗೆ ಅನಾರೋಗ್ಯದಿಂದ ನಿಧನಾರಾದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ 25 ಸಾವಿರ ಸಹಾಯಧನವನ್ನು ನೀಡಿ ಸ್ವಾಂತನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷಭಟ್ಟ ಬೂಸಪ್ಪ ಬೇವಿನಹಳ್ಳಿ ಅವರ ಕುಟುಂಬ ತ್ರೀವವಾದ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಪತ್ನಿ ನಾಗವ್ವ ಬೇವಿನಹಳ್ಳಿ ನಾಲ್ಕು ಜನ ಹೆಣ್ಣುಮಕ್ಕಳಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಕುಟುಂಬ ನಿರ್ವಹಣೆಗೆ ಬಹಳ ತೊಂದರೆ ಆಗುತ್ತಿದೆ ಇದನ್ನು ಮನಗೊಂಡು ಗ್ರಾಮಸ್ಥರ ಸಮ್ಮುಖದಲ್ಲಿ ಆ ಕುಟುಂಬಕ್ಕೆ ಸಹಾಯಧನ ನೀದಿದ್ದೇವೆ. ದೇವರು ಅವರ ಕುಟುಂಬಕ್ಕೆ ನಿಧನದ ದುಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು ಈ ಸಂದರ್ಭದಲ್ಲಿ ಭಂಡಾರದ ಗುರುಗಳು ಮಲ್ಲಪ್ಪಯ್ಯ ಒಡೆಯರ್, ದೇವಪ್ಪ ವಾಸರದ, ದಿಳ್ಳೆಪ್ಪ ಐಗಳ, ಪಕ್ಕೀರಪ್ಪ ಐಗಳ, ವಕೀಲ ನಾಗರಾಜ ಸಂಶಿ, ಸಿದ್ದಪ್ಪ ಬಾತಿ, ನಿಂಗಣ್ಣ ದ್ಯಾಮಣ್ಣನವರು, ಪ್ರಕಾಶ ಬಳ್ಳಾರಿ, ದ್ಯಾಮಪ್ಪ ಐಗಳ, ರುದ್ರಪ್ಪ ಜಜ್ಜರಿ, ಬಸಪ್ಪ ಪಲ್ಲಕ್ಕಿ, ಹನುಮಂತಪ್ಪ ನಾಯರ್, ಮಾಲತೇಶ ನಾಯರ್, ಮುತ್ತು ಬಣಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read All News