ಯುಜಿಡಿ ಕಾಮಗಾರಿಗೆ ಪ್ರಾಯೋಗಿಕವಾಗಿ ಚಾಲನೆ

  • 14 Jan 2024 , 9:57 PM
  • Haveri
  • 103

ಬ್ಯಾಡಗಿ: ಪಟ್ಟಣದ 23 ವಾರ್ಡಗಳು ಹಾಗೂ ಹೊಸಬಡಾವಣೆ ಸೇರಿದಂತೆ ಒಳಚರಂಡಿ ಕಾಮಗಾರಿಗೆ 65.47 ಕೋ.ರೂ. ಮಂಜೂರಾಗಿದೆ. 24X7 ಕುಡಿಯುವ ನೀರು ಪೂರೈಕೆ ಯೋಜನೆಗೆ 44.57 ಕೋ.ರೂ ಹಾಗೂ ರಾಣೇಬೆನ್ನೂರಿನಿಂದ ಬ್ಯಾಡಗಿ ಪೈಪಲೈನ್ ನವೀಕರಣಕ್ಕೆ 8 ಕೋ.ರೂ ಹಾಗೂ ಮನೆಮನೆಗಳಿಗೆ ನೀರಿನ ಪೈಪ ಚೆಂಬರ್ ಅಳವಡಿಸಲು 2.5 ಕೋಟಿರೂ. ಮಂಜೂರಾಗಿದ್ದು, ಕಾಮಗಾರಿ ನಡೆದಿದೆ ಎಂದು ಸಹಾಯಕ ಕಾರ್ಯಪಾಲಕ ಅಧಿಕಾರಿ ನವೀನಕುಮಾರ ಎಚ್.ವಿ.ತಿಳಿಸಿದರು ಈ ಕುರಿತು ಒಳಚರಂಡಿ ಹಾಗೂ 24X7 ಕುಡಿಯುವ ನೀರು ಪೂರೈಕೆಯ ಯೋಜನೆ ಪರಿಶೀಲನೆ ನಡೆಸಿದ ಬಳಿಕ ಮಾಹಿತಿ ನೀಡಿದ ಅವರು ಪಟ್ಟಣದ ಒಳಚರಂಡಿ ಹಾಗೂ 24X7 ಕಾಮಗಾರಿ ಶೇ90 ರಷ್ಟು ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ಸಂಪರ್ಕ ನೀಡಲಾಗುತ್ತಿದೆ. ಒಟ್ಟು ಶೇ.90 ರಷ್ಟು ಕಾಮಗಾರಿ ಪೂರ್ಣಗೊಳಿಸಿದ್ದು, ಹಂತಹಂತವಾಗಿ ಸಂಪರ್ಕ ನೀಡಲಾಗುವುದು ಎಂದರು. ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಮಾತನಾಡಿ, ಒಳಚರಂಡಿ ನೀರು ಹರಿದು ಸಂಗ್ರಹವಾಗಲು ದೊಡ್ಡ ಮಟ್ಟದ ನೀರು ಶುದ್ದೀಕರಣ ಘಟಕವನ್ನು ತೆರೇದಹಳ್ಳಿ ಬಳಿ ನಿರ್ಮಿಸಿದೆ. ಪಕ್ಕದಲ್ಲಿ ಕಸವನ್ನು ಬೇರ್ಪಡಿಸಿ ಮರುಬಳಕೆ ಮಾಡುವ ಹಾಗೂ ಇತ್ಯಾದಿ ಕಾಮಗಾರಿಗಳು ನಡೆದಿದ್ದು, 23 ವಾರ್ಡಗಳಲ್ಲಿ ಪೈಪಲೈನ್ ಹಾಗೂ ಚೆಂಬರ್ ನಿರ್ಮಿಸಿದ್ದು, ಗಾಂದಿನಗರ, ವಿದ್ಯಾನಗರ, ಬಸವೇಶ್ವರ ನಗರ, ನೇಹರು ನಗರಗಳಲ್ಲಿ ಸಂಪರ್ಕ ನೀಡಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. ಸಾರ್ವಜನಿಕರು ನಿಯಮಿತವಾಗಿ ನಿಗಧಿಪಡಿಸಿದ ಶುಲ್ಕ ನೀಡಬೇಕು. ಹೊಸ ನಳಗಳ ಸಂಪರ್ಕ ಪಡೆಯುವರು ಪುರಸಭೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಇಂಜಿನೀಯರ್ ಎಂ.ಉಮೇಶ, ಮಹಾಂತೇಶ ಹಳ್ಳಿ, ಎ.ವೀರಾಚಾರ್ಯ, ಪುರಸಭೆ ಸದಸ್ಯರಾದ ಈರಣ್ಣ ಬಣಕಾರ, ಸುಭಾಸ ಮಾಳಗಿ, ಗಾಯತ್ರಿ ರಾಯ್ಕರ, ಇದ್ದರು.

Read All News