ಮೊಹರಂ ಹಬ್ಬದ ಅಂಗವಾಗಿ ಆಲೈ ದೇವರುಗಳಿಗೆ ವಿಶೇಷ ಪೂಜೆ

  • 15 Jan 2024 , 2:07 AM
  • Haveri
  • 189
ಬಂಕಾಪುರ : ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ತ್ಯಾಗ ಬಲಿದಾನದ ಸಂಕೇತವಾಗಿ ಆಚರಿಸುವ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಮೊಹರಂ ಹಬ್ಬದ ಅಂಗವಾಗಿ ಆಸುರಖಾನಗಳಲ್ಲಿ ಪ್ರತಿಷ್ಠಾಪಿಸಿದ ಬೀಬಿ ಮಾತಿಮಾ, ಆಲೈ ದೇವರುಗಳಿಗೆ ಹಿಂದೂ ಹಾಗೂ ಮುಸ್ಲೀಂ ಬಾಂಧವರು ಹೂ, ಸಕ್ಕರೆ ಊದಿಸುವ ಮೂಲಕ ತಮ್ಮ ಭಕ್ತಿಯ ನಮನ ಸಲ್ಲಿಸಿದರು. ತಮ್ಮ ಇಷ್ಠಾರ್ಥ ಸಿದ್ದಿಗಾಗಿ ಹುಲಿ ವೇಷತೋಟ್ಟು ಹಲಗೆ ತಾಳಕ್ಕೆ ಕುಣಿದು ದೇವರುಗಳಿಗೆ ತಮ್ಮ ಭಕ್ತಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಲ್ಲಾಸಾಬ ಅಬ್ದುಲ್‍ಖಾದರ ಮುಲ್ಲಾ ಮಾತನಾಡಿ, ಈ ಬಾರಿ ಕೊರೊನಾ ಮಹಾಮಾರಿ ರೋಗ ಉಲ್ಬಣಿಸಿರುವುದರಿಂದ ಮೊಹರಂ ಹಬ್ಬವನ್ನು ಕೋವಿಡ್-19 ನಿಯಮಾವಳಿಯಂತೆ ಅತೀ ಸರಳವಾಗಿ ಆಚರಿಸಲಾಗುತ್ತಿದೆ. ರವಿವಾರ ಬೆಳಗಿನ ಜಾವ ಅಗ್ನಿಕುಂಡ ಹೊತ್ತಿಸುವ ಕಾರ್ಯ ನಡೆಯಲಿದ್ದು, ಭಕ್ತರು ಅಗ್ನಿಕುಂಡದ ಮೇಲೆ ನಡೆದು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಅಲ್ಲಾನಲ್ಲಿ ತಮ್ಮ ಭಕ್ತಿನಮನ ಸಲ್ಲಿಸಲಿದ್ದಾರೆ ಎಂದು ಹೇಳಿದರು. ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹಮ್ಮದಹುಸೇನ ಖತೀಬ, ತಹಮಿದ ಖಾಜಿ, ಅಯೂಬಖಾನ ಪಠಾಣ, ಬಾಬಾ ತರೀನ, ಖ್ವಾಜಾವೈಸ್ ಖಲೀಫಾ, ಹಜರೆಸಾಬ ಜಮಾದಾರ, ನೂರಅಹ್ಮದ ಡೊರಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Read All News