ಬಂಕಾಪುರ: ಗಣೇಶ ಚತುರ್ಥಿ ನಂತರ ಅಷ್ಠಮಿ ದಿನದಂದು ಅಲ್ಫಾಆಯುಷ್ಯ ಪಡೆದು ಕುಂಬಾರರ ಮನೆಯಲ್ಲಿ ಹುಟ್ಟಿಬರುವ ಜೋಕುಮಾರ ಸ್ವಾಮಿಯನ್ನು ಮಹಿಳೆಯರು ವಿಶೇಷವಾಗಿ ಬುಟ್ಟಿಯಲ್ಲಿ ಕುಳ್ಳರಿಸಿ ಬೆವಿನ ಟೋಂಗೆಗಳಿಂದ ಸಿಂಗರಿಸಿಕೋಡು ರೈತರ ಮನೆ, ಮನೆಗೆ ಬಂದು ಜೋಕುಮಾರಸ್ವಾಮಿ ನಿಮ್ಮ ಮನೆಗೆ ಬಂದಾನ ಬೆಣ್ಣಿ ಕೊಡ್ರೆವ್ವಾ… ಕಾಳು, ಕಡಿ ನೀಡ್ರೆವ್ವಾ ಎಂದು ಅನಾದಿಕಾಲದಿಂದಲೂ ಬಂದ ಪೌರಾಣಿಕ ಹಿನ್ನಲೆಯುಳ್ಳ ಹಾಡುಗಳನ್ನು ಹಾಡಿ ಮನೆಯವರನ್ನು ಕರೆದು ಜೋಕುಮಾರಸ್ವಾಮಿಯನ್ನು ಪೂಜಿಸುತ್ತಾರೆ. ಅವರು ನೀಡಿದ ದವಸ ದಾನ್ಯವನ್ನು ಪಡೆದು, ಕುಂಬಳದ ಎಲೆಯಲ್ಲಿ ಜೋಳದ ನುಚ್ಚಿನಿಂದ ತಯಾರಿಸಿದ ಅಂಬಲಿಯನ್ನು ನೀಡಿ, ಕುಟುಂಬದವರಿಗೆ ಹಾರೈಸಿ ಮುಂದೆ ಸಾಗುತ್ತಾರೆ. ರೈತ ಕುಟುಂಬ ಜೋಕುಮಾರಸ್ವಾಮಿ ನೀಡಿದ ಅಂಬಲಿಯನ್ನು ಹೋಲ, ಗದ್ದೆಗಳಿಗೆ ಹರಡಿ ಸಮೃದ್ದ ಬೆಳೆ ನೀಡೆಂದು ಜೋಕುಮಾರಸ್ವಾಮಿಯನ್ನು ಬೇಡಿಕೋಳ್ಳುವ ಪ್ರತೀತಿ ಅನಾದಿಕಾಲದಿಂದಲೂ ಇಂದಿನವರೆಗೂ ನಡೆದುಕೋಂಡು ಬಂದಿದೆ. ಬೆಣ್ಣೆ ಪ್ರಿಯನಾದ ಜೋಕುಮಾರಸ್ವಾಮಿಗೆ ಕನ್ಯೆಯರು ಒಳ್ಳೆಯ ವರ ಲಭಿಸಲೆಂದು ಬೇಡಿಕೋಂಡರೆ, ಮದುವೆಯಾದ ಮಹಿಳೆಯರು ಸಂತಾನ ಭಾಗ್ಯ ಕರುಣಿಸೆಂದು ಬೇಡಿಕೋಳ್ಳುತ್ತಾರೆ. ಹಸುಗಳ ಮೈಯಲ್ಲಿನ ಉಣ್ಣೆ ಕಳೆಯಲು, ಹಸು ಕರೆಯುವ ಹಾಲು ಹೆಚ್ಚಾಗಲೆಂದು ಒಟ್ಟಾರೆ ಇಷ್ಟಾರ್ಥ ಸಿದ್ಧಿಗಾಗಿ ಜೋಕುಮಾರಸ್ವಾಮಿಯನ್ನು ಪೂಜಿಸಿಕೋಂಡು ಬರುವ ಪದ್ದತಿ ಹೆಚ್ಚಾಗಿ ಉತ್ತರಕರ್ನಾಟಕ ಬಾಗದಲ್ಲಿ ಅನಾದಿಕಾಲದಿಂದಲೂ ಇಂದಿನ ವರೆಗೂ ಮುಂದುವರೆದುಕೋಂಡು ಬಂದಿದೆ. ಅದರಂತೆ ಪಟ್ಟಣದ ಓಣಿಗಳಲ್ಲಿ ಆಗಮಿಸಿದ ಜೋಕುಮಾರಸ್ವಾಮಿಗೆ ರೈತಾಪಿ ಕುಟುಂಬದವರು ಮರಗಳಲ್ಲಿ ಅಕ್ಕಿ, ಜೋಳ, ಒಳ್ಳೆಣ್ಣಿ, ಉಪ್ಪು, ದವಸ ದಾನ್ಯ, ಎಲೆ, ಅಡಿಕೆ ತಂದು ಬುಟ್ಟಿಯಲ್ಲಿ ತಂದ ಜೋಕುಮಾರಸ್ವಾಮಿ ಬಾಯಿಗೆ ಬೆಣ್ಣೆ ಸವರಿ ವಿಶೇಷ ಪೂಜೆ ಸಲ್ಲಿಸಿ ದನ,ಕರುಗಳ ರಕ್ಷಣೆ ಸೇರಿದಂತೆ ಸಮೃದ್ದ ಮಳೆತಂದು ಒಳ್ಳೆಯ ಫಸಲನ್ನು ನೀಡುವಂತೆ ಭಕ್ತಿಯಿಂದ ಬೇಡಿ ಕೊಂಡಿದ್ದಾರೆ.
ನಮ್ಮ ಪೂರ್ವಜರ ಕಾಲದಿಂದಲೂ ಜೋಕುಮಾರಸ್ವಾಮಿಯನ್ನು ಬುಟ್ಟಿಯಲ್ಲಿ ಕುಳ್ಳಿರಿಸಿ ರೈತರ ಮನೆಗಳಿಗೆ ತೆರಳಿ ಅವರು ನೀಡಿದ ದವಸ ದಾನ್ಯಗಳನ್ನು ಪಡೆದು ಆ ಕುಟುಂಬದವರನ್ನು ಹಾರೈಸಿ ಬರುವ ಪದ್ದತಿಯಿದ್ದು, ಅದನ್ನು ನಾವು ಕೂಡಾ ಮುಂದುವರೆಸಿಕೊಂಡು ಬರುತ್ತಿದ್ದೇವೆ. ಜೋಕುಮಾರಸ್ವಾಮಿ ಭಕ್ತಿಯಿಂದ ಬೇಡಿದವರ ಇಷ್ಟಾರ್ಥಗಳನ್ನು ಸಿದ್ಧಿಸುವ ಶಕ್ತಿಯನ್ನು ಪಡೆದಿದ್ದಾನೆ. ಎಂದು ಹೇಳುತ್ತಾರೆ ಲಕ್ಷ್ಮವ್ವ ಜಾಡರ