ಬೆಳಗಾವಿ: ದಾವಣಗೆರೆಯಲ್ಲಿ ನಡೆದ ಅಖಿಲ ಕರ್ನಾಟಕ ವಿಜಯೆಂದ್ರ ಯಡಿಯೂರಪ್ಪ ಸೇನೆಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಹಾಂತೇಶ ವಕ್ಕುಂದ ಫೌಂಡೇಶನ್ ಹಾಗೂ ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಆಯುರ್ವೇದಿಕ ಔಷಧದಂತಿರುವ ಕಬಾಸುರ ಕುಡಿನೀರ ಎಂಬ ಆಯುರ್ವೇದಿಕ ಚೂರ್ಣವನ್ನು ಕಿಲ್ಲರ್ ಕರೋನ ತಡೆಗಟ್ಟುವ ಹಿನ್ನೆಲೆಯಲ್ಲಿ ಇಂದು ಅಖಿಲ ಕರ್ನಾಟಕ ವಿಜಯೆಂದ್ರ ಯಡಿಯೂರಪ್ಪ ಸೇನೆಯಿಂದ ಹಂಚಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ್ ಅರಸೀಕೆರೆ, ಪ್ರದಾನ ಕಾರ್ಯದರ್ಶಿ ಮಾರುತಿ ಸಂಕೋಳ್ಳಿ, ರಾಜ್ಯಾಧ್ಯಕ್ಷ ಹರ್ಷವರ್ದನ, ಕರುನಾಡು ರಕ್ಷಣ ವೇದಿಕೆ ಅದ್ಯಕ್ಷ ಸೋಮು, ಸಂಘಟನೆಯೆ ಬೆಂಗಳೂರು ವಲಯದ ಅಧ್ಯಕ್ಷರು ಸೇರಿದಂತೆ ಕಾರ್ಯಕರಣಿ ಸದಸ್ಯರು ಹಾಜರಿದ್ದರು.