ಬೆಳಗಾವಿ: ಕರ್ನಾಟಕ ರಕ್ಷಣಾ ವೇಧಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡ ಇಂದು ಬೆಳಗಾವಿಗೆ ಭೇಟಿ ನೀಡಿದ್ದಾರೆ. ತಾಲೂಕಿನ ಪಿರಣವಾಡಿ ಗ್ರಾಮಕ್ಕೆ ಭೇಟಿ ನೀಡಿದ ನಾರಾಯಣ ಗೌಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಡು ನುಡಿಯ ಸೇವೆಗೆ ಯಾವಾಗಲೂ ಬದ್ಧರಾಗಬೇಕು. ಕನ್ನಡಿಗರು ಈ ನೆಲದ ಮಾಲೀಕರು ಇದು ನಮ್ಮ ಸ್ವತ್ತು. ರಾಯಣ್ಣನ ಧರ್ಮ ಭೂಮಿ ಬೆಳಗಾವಿಯಲ್ಲಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಆಗಿದೆ ಇದ್ದನು ಪ್ರಶ್ನೆ ಮಾಡಲು ಯಾರಿಗೂ ಹಕ್ಕಿಲ್ಲ, ರಾಯಣ್ಣನ ಪ್ರತಿಮೆ ಅನಾವರಣ ಮಾಡಿದ್ದು ಮಹಾರಾಷ್ಟ್ರ, ಮುಂಬೈಲ್ಲಿ ಅಲ್ಲಾ ನಮ್ಮ ನಾಡಿನಲ್ಲಿ ಪ್ರತಿಮೆ ಪ್ರತಿಷ್ಠಾಪನೆ ಆಗಿದೆ ಎಂದು ಹೇಳಿ ಪ್ರತಿಮೆ ಹಾಗೂ ವೃತ್ತಕ್ಕೆ ಹೆಸರು ಬೇರೆ ಹೆಸರು ಇಡುವ ಕೆಲಸ ಆಗಬಾರದು ಇದು ಅಧಿಕೃತವಾದ ಪ್ರತಿಮೆ ಇದಾಗಿದೆ ಈ ವೃತ್ತಕ್ಕೆ ರಾಯಣ್ಣನ ಹೆಸರು ಇಡಬೇಕು.
ಗುಂಡಾಗಿರಿ ಮಾಡುವವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಅಮಾಯಕ ಜನರು, ಯುವಕರನ್ನು ದಾರಿ ತಪ್ಪಿಸುವ ಕೆಲಸ ಎಂಇಎಸ್ ಹಾಗೂ ಶಿವಸೇನೆ ಮಾಡುತ್ತಿದೆ. ನಾವು ಶಿವಾಜಿ ವಿರೋಧಿಗಳಲ್ಲ, ಶಿವಾಜಿ ಒಬ್ಬ ರಾಷ್ಟ್ರ ನಾಯಕ ಎಂದು ಹೇಳಿ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚೆನ್ನಮ್ಮ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರು ಇಡಬೇಕು, ಸುವರ್ಣಸೌಧದ ಮುಂದೆ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಯಣ್ಣ ಪ್ರತಿಮೆ ನಿರ್ಮಿಸ ಬೇಕು ಎಂದು ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಯೂ ಮಾತನಾಡುತ್ತೇನೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಬೆಳಗಾವಿಯಲ್ಲಿ ಹೇಳಿದ್ದಾರೆ.