ಸಂಘಟನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಬೇಕು; ಸತೀಶ್ ಜಾರಕಿಹೊಳಿ

  • 26 Dec 2023 , 7:02 AM
  • Belagavi
  • 217

ಹಿಡಕಲ್ ಡ್ಯಾಂ: ಸಂಘಟನೆಗಳು ಕೇವಲಉದ್ಘಾಟನೆಗೆ ಸೀಮಿತವಾಗದೆ ಸಂಘರ್ಷ ಹೋರಾಟದ ಮೂಲಕ ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಗ್ರಾಮದ, ಸಮಾಜದ ಅಭಿವೃದ್ಧಿಗೆ ಪೂರಕವಾಗಬೇಕೆಂದು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಅವರು ರವಿವಾರ ಡಿ.30 ರಂದು ಬಗರನಾಳ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗ್ರಾಮೀಣಾಭಿವೃದ್ದಿ ಸಂಘ ಮತ್ತು ಅಕ್ಕಮಹಾದೇವಿ ಮಹಿಳಾ ಗ್ರಾಮೀಣಾಭಿವೃದ್ಧಿ ಸ್ವಸಹಾಯ ಸಂಘ ಉದ್ಘಾಟಿಸಿ ಮಾತನಾಡಿದ ಅವರು ಕಳೆದ12 ವರ್ಷಗಳಿಂದ ಯಮಕನಮರಡಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಸತೀಶ ಪೌಂಡೇಶನದಿಂದ ಸಮುದಾಯ ಭವನಗಳಿಗೆ, ಶಾಲಾ ಕಾಲೇಜುಗಳಿಗೆ 1 ಸಾವಿರ ಕುರ್ಚಿಗಳನ್ನು ವಿತರಿಸಲಾಗಿದ್ದು, ಮುಂಬರುವ ದಿನಗಳಲ್ಲಿ 10 ಸಾವಿರ ಕುರ್ಚಿಗಳನ್ನು ವಿತರಿಸುವ ಯೋಜನೆಯಾಗಿದೆ.

ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸ ಇಲಾಖೆ ಮತ್ತು ಸೈನಿಕ ಇಲಾಖೆಗಳಲ್ಲಿ ಭರ್ತಿಯಾಗಲು ಹಳೆ ವಂಟಮುರಿ ಬಳಿ 10 ಎಕರೆ ಜಮೀನನಲ್ಲಿ ಮಿಲಟರಿ ಅಕಾಡೆಮಿ ತರಬೇತಿ ಕೇಂದ್ರವನ್ನು ಆರಂಭಿಸುವ ಯೋಜನೆಯಿದೆ ಎಂದು ಸತೀಶ ಜಾರಕಿಹೊಳಿ ಹೇಳಿದರು. ಕುಂದರಗಿ ಶ್ರೀ ಅಡವಿ ಸಿದ್ದೇಶ್ವರ ಮಠದ ಶ್ರೀ ಅಮರ ಸಿದ್ದೇಶ್ವರ ಮಹಾಸ್ವಾಮಿಗಳು ಆರ್ಶಿವಚನ ಹೇಳಿದರು. ಚಿಕಲದಿನ್ನಿ ಅದೃಷ್ಯಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಜಿ.ಪಂ.ಸದಸ್ಯ ಮಂಜುನಾಥ ಪಾಟೀಲ ಮಾಜಿ ತಾ.ಪಂ.ಸದಸ್ಯ ಶೈಹೀನಾಜ ಗಡಿಕಾಯಿ, ಶ್ರೀ ಮಹರ್ಷಿ ವಾಲ್ಮೀಕಿ ಗ್ರಾಮೀಣಾಭಿವೃದ್ದಿ ಸಂಘದ ಅಧ್ಯಕ್ಷ ಮಲ್ಲೇಶ ಸತ್ಯಪ್ಪ ನಾಯಿಕ ಮಾತನಾಡಿದರು. ಶಿಕ್ಷಕ ರಾಜೇಂದ್ರ ಪಂಗನ್ನವರ ಉಪನ್ಯಾಸ ನೀಡಿದರು, ಭೀಮರಾಯಿ ಲಂಕೆನ್ನವರ ಸ್ವಾಗತಿಸಿದರು. ಜಂಗ್ಲಿಸಾಹೇಬ ನಾಯಿಕ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾರುತಿ ನಾಯಿಕ, ಬಸನಾಯ್ಕ ಕುಂದರಗಿ, ಚಂದ್ರಶೇಖರ ಹುಡೆದ, ಮಕ್ತುಮಸಾಬ ಅಪ್ಪುಬಾಯಿ, ಸುರೇಶ ಡುಮ್ಮನಾಯಿಕ, ಕರೆವ್ವ ಗುಡೆನ್ನವರ, ಜಿ.ಪಂ.ಸದಸ್ಯ ಫಕ್ಕೀರವ್ವ ಹಂಚಿನಮನಿ, ತಾ.ಪಂ. ಸದಸ್ಯ ಅಶ್ವನಿ ಗುಟಗುದ್ದಿ, ಶೋಭಾ ಮಾರುತಿ ನಾಯಿಕ, ಅಮೀರಾಭಿ ದೇಸಾಯಿ, ಕವಿತಾ ಮುರಕಟ್ಟಿ, ಫಜಲ ಮಕಾನದಾರ, ಇಮಾಮ ಹುಸೇನ ನಧಾಪ, ಬಾಲಕೃಷ್ಣ ನಾಯಿಕ, ಮಾರುತಿ ನಾಯಿಕ, ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

Read All News