ಬಂಕಾಪುರ : ಈ ವರ್ಷ ಹಲವಾರು ರೈತರು ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ ಹಾಗೂ ನೇರೆ ಹಾವಳಿ ಇಂದ ರೈತರು ಬೇಸತ್ತು ಹೋಗಿದ್ದಾರೆ ಇಂದು ತಾಲೂಕಿನ ಕಂದಾಯ ನಿರೀಕ್ಷಕ ಆರ್.ಎಮ್.ನಾಯಕ ನೇತೃತ್ವದ ತಂಡ ಶಿಡ್ಲಾಪುರ ಗ್ರಾಮದ ಡೊಂಕೇರಿ ಕೆರೆಗೆ ಬೇಟಿ ನೀಡಿ ರೈತರ ಸಮಸ್ಯಗಳನ್ನು ಆಲಿಸಿದರು. ಮಳೆಗಾಲದಲ್ಲಿ ರೈತರು ಕೃಷಿಚಟುವಟಿಕೆ ಕೈಗೊಳ್ಳಲು ತುಂಬಿದ ಕೆರೆಯಲ್ಲಿ ಕೃಷಿ ಸಲಕರಣೆಗಳೊಂದಿಗೆ, ಕೂಲಿ ಕಾರ್ಮಿಕರನ್ನೂ ಕೂಡಾ ತೆಪ್ಪದ ಸಹಾಯದಿಂದ ಕರೆದೊಯ್ಯು ಬೇಕಾದ ಅನಿವಾರ್ಯತೆಯಿದೆ. ಕಳೆದ ವರ್ಷ ನೆರೆಹಾವಳಿ ಸಂದರ್ಭದಲ್ಲಿ ಪ್ರಾಣವನ್ನು ಕೈಯಲ್ಲಿ ಹಿಡಿದುಕೋಂಡು ಹರಸಾಹಸ ಪಟ್ಟು ಕೃಷಿ ಚಟುವಟಿಕೆಗಳನ್ನು ಮಾಡಿರುವುದನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಈ ವಿಷಯವನ್ನು ಸುಮಾರು ಐದಾರು ವರ್ಷಗಳಿಂದ ಸಂಬಂದಪಟ್ಟ ಅಧಿಕಾರಿ, ಈ ಕ್ಷೇತ್ರದ ಶಾಸಕರ ಗಮನಕ್ಕೂ ತಂದರೂ ಕೂಡಾ ಇಲ್ಲಿರುವ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ. ರೈತರು ಪ್ರಾಣ ಕಳೆದುಕೊಂಡ ಮೇಲೆ ಸೂಕ್ತ ಪರಿಹಾರ ಸಿಕ್ಕಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿರುವ ರೈತರ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು. ರೈತರನ್ನು ಒಂದು ಕಡೆ ಸೇರಿಸಿ ರೈತ ರೊಂದಿಗೆ ಚರ್ಚೆ ನಡೆಸಿದ ಕಂದಾಯ ಅಧಿಕಾರಿಗಳು ರೈತರ ಸಂಪೂರ್ಣ ಸಮಸ್ಯೆಗಳನ್ನು ಆಲಿಸಿ, ಕೆರೆಗೆ ಸೇತುವೆ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರರವರಿಗೆ ಲಿಖಿತರೂಪದಲ್ಲಿ ಬರೆದು ತಿಳಿಸಲಾಗುವುದು. ಸರ್ವೇ ಅಧಿಕಾರಿಗಳು, ಇಂಜನೀಯರರವರ ಗಮನಕ್ಕೂ ತರಲಾಗುವುದು. ಇಲ್ಲಿರುವ ರೈತರ ಸಮಸ್ಯೆಯನ್ನು ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನಮಾಡುವುದಾಗಿ ಹೇಳಿ ರೈತರಿಗೆ ಆತ್ಮವಿಶ್ವಾಸ ತುಂಬುವ ಕೇಲಸ ಮಾಡಿದರು.