ರಾಣೇಬೆನ್ನೂರ : ಇಂದು ಬುಧವಾರ ಕಿಚ್ಚ ಸುದೀಪ ಜನ್ಮ ದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದ ತಾಲೂಕು ಘಟಕದ ವತಿಯಿಂದ ನಗರದ ರೇಣುಕಾ ಯಲ್ಲಮ್ಮ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶ್ವೇಟರ್ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿ ಆರ್ ಪಿ ಎಫ್ ಅಧಿಕಾರಿ ಪ್ರಕಾಶ ತಳವಾರ ಮಾತನಾಡಿ, ವಿಶೇಷ ಚೇತನರು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿ ಸ್ವಾವಲಂಬಿ ಜೀವನ ಸಾಗಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿ ಬದುಕಬೇಕು. ವಿಶೇಷ ಚೇತನರಲ್ಲಿ ಅದಮ್ಯ ಶಕ್ತಿಯಿದ್ದು ಅದಕ್ಕೆ ಸೂಕ್ತ ಪ್ರೋತ್ಸಾಹ ನೀಡಿ ಪ್ರಜ್ವಲಿಸುವಂತೆ ಮಾಡಬೇಕು ಎಂದರು. ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಪಾಂಡುರಂಗ ಗಂಗಾವತಿ, ಶಾಲೆಯ ಪ್ರಾ. ಎಚ್.ಕೆ.ಶಿವಕುಮಾರ, ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ಬಸವರಾಜ ಚಳಗೇರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂಕಣ್ಣನವರ, ಬಸವರಾಜ ಕುಡುಪಲೇರ, ಚಂದ್ರಗೌಡ ಮುದಕನಗೌಡ, ರಘು ಕನ್ನಮ್ಮನವರ, ನಾರಾಯಣ ಅಂತರವಳ್ಳಿ, ಕಾಂತೇಶ ಮಾಳಗಿ, ಸೋಮನಗೌಡ ಗೌಡ್ರ, ವಿಶ್ವನಾಥ ಧೂಪದ ಹಾಗೂ ಕಿಚ್ಚ ಸುದೀಪ ಅಭಿಮಾನಿ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.