ಬೆಳಗಾವಿ: ಜಿಲ್ಲೆಯಲ್ಲಿ ಸುಮಾರು 80,000 ಕ್ಕಿಂತಲೂ ಹೆಚ್ಚು ಕಟ್ಟಡ ಕಾರ್ಮಿಕರು , ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿ ಗುರುತಿನ ಚೀಟಿ ಪಡೆದಿರುತ್ತಾರೆ . ಕೋವಿಡ -19 ರಿಂದ ಕಾರ್ಮಿಕರಿಗೆ ತೊಂದರೆಯಾಗಿದೆ ಅಂತಾ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್ . ಯಡಿಯೂರಪ್ಪನವರು ಪ್ರತಿಯೊಬ್ಬ ಕಟ್ಟಡ ಕಾರ್ಮಿಕನಿಗೆ ರೂ .5000 / - ಗಳ ಸಹಾಯಧನವನ್ನು ಕೊಡುತ್ತೇವೆ ಅಂತಾ ಮೂರು ತಿಂಗಳ ಹಿಂದೆ ಘೋಷಣೆ ಮಾಡಿದ್ದರು . ಆದರೆ ಇಲ್ಲಿಯವರೆಗೂ 10-15 ಸಾವಿರ ಕಟ್ಟಡ ಕಾರ್ಮಿಕರಿಗೆ ರೂ .5000 / - ಸಹಾಯಧನ ಬಂದಿರುವದಿಲ್ಲ ಮತ್ತು ಕಟ್ಟಡ ಕಾರ್ಮಿಕರಿಗಾಗಿ ರೇಶನ ಕಿಟ್‌ಗಳನ್ನು ಕಾರ್ಮಿಕ ಇಲಾಖೆಯಿಂದ ಪ್ರತಿಯೊಂದು ಮತಕ್ಷೇತ್ರಕ್ಕೆ ಒದಗಿಸಲಾಗಿರುತ್ತದೆ . ಆದರೆ ಎಲ್ಲ ಕಟ್ಟಡ ಕಾರ್ಮಿಕರಿಗೆ ರೇಶನ ಕಿಟ್ ಗಳು ದೊರೆತಿರುವುದಿಲ್ಲ .
ಅದು ಅಲ್ಲದೆ ಕಾರ್ಮಿಕರಿಗಾಗಿ ದೊರೆಯುವ ವಿವಿಧ ಆರ್ಥಿಕ ಸಹಾಯಧನ ಅಂದರೆ ಮದುವೆ , ಶಿಕ್ಷಣ , ಆರೋಗ್ಯ ಹಾಗೂ ಪಿಂಚಣಿಯ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಿದ ಕಾರ್ಮಿಕರಿಗೆ ಕಳೆದ ಎರಡು ವರ್ಷಗಳಿಂದ ಸಹಾಯಧನ ದೊರೆತಿರುವದಿಲ್ಲ . ಆದ್ದರಿಂದ ಈ ಕೆಳಗಿನ ಬೇಡಿಕೆಗಳನ್ನು ಸಲ್ಲಿಸುತ್ತಿದ್ದೇನೆ.
1) ಪ್ರತಿಯೊಬ್ಬ ಕಟ್ಟಡ ಕಾರ್ಮಿಕನಿಗೆ ರೂ.5000/- ಗಳ ಸಹಾಯಧನ ತಕ್ಷಣವೇ ದೊರೆಯಬೇಕು.
2) ನೊಂದಾಯಿತ ಪ್ರತಿಯೊಬ್ಬ ಕಟ್ಟಡ ಕಾರ್ಮಿಕನಿಗೆ ರೇಶನ್ ಕಿಟ್ ದೊರೆಯಬೇಕು .
3) ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ದೊರೆಯುವ ಆರ್ಥಿಕ ಸಹಾಯಧನ ಸಕಾಲ ಕಾಯ್ದೆಯ ಪ್ರಕಾರ ಕಾಲಮಿತಿಯಲ್ಲಿ ದೊರೆಯಬೇಕು.
ಈ ಎಲ್ಲ ಬೇಡಿಕೆಗಳನ್ನು ಒಂದು ವಾರದಲ್ಲಿ ಈಡೇರಿಸಬೇಕು . ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವದು ಎಂದು ಕಾರ್ಮಿಕ ಸಂಘ ಅಧ್ಯಕ್ಷ ಎನ್ಆರ್ ಲಾತೂರ ಅವರು ಎಚ್ಚರಿಸಿದರು .