ದೇಶದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಅತ್ಯ ಅವಶ್ಯವಕವಾಗಿದೆ

  • 15 Jan 2024 , 3:07 AM
  • Haveri
  • 135

ಬಂಕಾಪುರ: ದೇಶದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಅತ್ಯ ಅವಶ್ಯವಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಲೈನ್ಸ್ ನವಭಾರತ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಜಿ.ಎಸ್.ದೇಸಾಯಿ ಶಿಕ್ಷಕರಿಗೆ ಕರೆ ನೀಡಿದರು. ಲೈನ್ಸ್ ನವಭಾರತ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ ಶಿಕ್ಷಕರ ದಿನಾಚರಣೆ ಅಂಗವಾಗಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸರ್ವಪಲ್ಲಿ ರಾಧಾಕೃಷ್ಣನ್ ರವರು ತಮ್ಮ ಶಿಕ್ಷಕ ವೃತ್ತಿಯಲ್ಲಿ ದೇವರನ್ನು ಕಂಡು ಮಕ್ಕಳಿಗೆ ಭೋದಿಸುತ್ತಿದ್ದರು. ಹಾಗಾಗಿಯೇ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಅಂತಹ ಮಹಾನ ಪುರುಷರಿಂದ ಶಿಕ್ಷರಿಗೆ ಒಳ್ಳೆಯ ಗೌರವ ಸಿಕ್ಕಂತಾಗಿದೆ. ಶಿಕ್ಷಕರು ಅವರಲ್ಲಿರುವ ಆದರ್ಶಮಯ ಗುಣಗಳನ್ನು ಅಳವಡಿಸಿಕೊಂಡು ನಡೆದಾಗ ಮಾತ್ರ ಶಿಕ್ಷಕ ದಿನಾಚರಣೆಗೆ ಒಂದು ಒಳ್ಳೆಯ ಅರ್ಥ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು. ಕೋವಿಡ್-19 ಹಿನ್ನಲೆಯಲ್ಲಿ ಅತಿ ಸರಳವಾಗಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬರಿ ಶಿಕ್ಷಕರೆಲ್ಲರೂ ಕೂಡಿ ರಾಧಾಕೃಷ್ಣನರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಮನ ಸಮರ್ಪಿಸುವ ಮೂಲಕ ಸರಳವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಿಕ್ಷಕರಾದ ವಿ.ಎಲ್.ವಿಜಾಪುರ, ಟಿ.ಎಸ್.ಶಿಗ್ಗಾಂವ, ಎಮ್.ಕೆ.ಸಂಶಿ, ಎಸ್.ಎಸ್.ಕಟಗಿಮಠ, ಸುರೇಶ ಮುರಿಗೇಣ್ಣವರ, ಎಂ.ಬಿ.ರಾಯಾಪುರ, ಕೆ.ಎಚ್.ಶಿವಯ್ಯನವರ, ಎಚ್.ಎನ್.ಹಳೆಮನಿ ಸೇರಿದಂತೆ ಇತರರು ಇದ್ದರು.

Read All News