ಶಿಗ್ಗಾವಿ: ತಾಲೂಕಿನ ಜನತೆಗೆ ಕೇವಲ ಭರವಸೆಗಳೆ ಹೆಚ್ಚಾಗಿವೆ ಕೆಲಸಗಳು ಆಗದೆ ಬಡವರ ಗೋಳು ಕೇಳುವವರಾರು ಎಂಬ ಸ್ಥಿತಿ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ಪಟ್ಟಣದ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಕಾಂಗ್ರೇಸ್ ಸೇರ್ಪಡೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಸದಸ್ಯರು ಶನಿವಾರ ಅವರ ಕಚೇರಿಯಲ್ಲಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಕಾಂತ ದುಂಡಿಗೌಡ್ರ ನನ್ನ ಮುಖ್ಯ ಉದ್ದೇಶ ಬಡವರ ಪರ ಕೆಲಸ ಮತ್ತು ಸಣ್ಣ ಸಣ್ಣ ಸಮುದಾಯಗಳ ಮೇಲೆತ್ತುವ ಮೂಲಕ ಕೈಲಾದ ಜನರ ಸೇವೆ ಮಾಡುವ ಕಡೆ ಗಮನ ಹರಿಸಿದ್ದೇನೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಮಾತ್ರ ಸಾಮಾಜಿಕ ನ್ಯಾಯ ನೀಡುವ ಪಕ್ಷವಾಗಿದೆ ಎಂದು ನಂಬಿದ್ದೇನೆ, ಇದಕ್ಕೆ ಜನರ ಆಶೀರ್ವಾದ ಮತ್ತು ಕ್ಷೇತ್ರದ ಜನತೆ ನನ್ನ ಮೇಲೆ ಇಟ್ಟಿರುವ ನಂಬಿಕೆಯಿಂದ ಅವರ ಸೇವೆ ಮಾಡಲು ಮುಂದಾಗಿದ್ದೇನೆ ಇದು ನಿರಂತರವಾಗಿರುತ್ತದೆ, ಸದಾ ಕ್ಷೇತ್ರದ ಜನತೆಯ ಆಶೀರ್ವಾದ ಇರಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ ಎನ್ ವೆಂಕೋಜಿ, ಕಾಂಗ್ರೇಸ್ ಕಾರ್ಯಾಧ್ಯಕ್ಷ ವಿರೇಶ ಆಜೂರ, ಮುಖಂಡರಾದ ಗುಡ್ಡಪ್ಪ ಜಲದಿ, ಕೇದಾರಪ್ಪ ಬಗಾಡೆ, ಗುರು ಅಣ್ಣಿಗೇರಿ ಸೇರಿದಂತೆ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಸದಸ್ಯರು ಇದ್ದರು.