ಕರೋನಾ ತಡೆಗಟ್ಟಲು ಮುಂಜಾಗೃತ ಅಗತ್ಯವಾಗಿದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

  • 15 Jan 2024 , 3:41 AM
  • Bengaluru
  • 101

ಹುಕ್ಕೇರಿ: ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಹಸ್ತ ಕಾರ್ಯಕ್ರಮದ ಕರೋನಾ ಯೋಧರಿಗೆ ತರಬೇತಿ ಮತ್ತು ಕಿಟ್ ವಿತರಣೆ ಜಿಲ್ಲಾಮಟ್ಟದ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಹಾಮಾರಿ ಕರೋನಾ ದೇಶದಲ್ಲಿ ತಾಂಡವಾಡುತ್ತಿರುವ ಸಂದರ್ಭದಲ್ಲಿ ಯಾವುದೇ ರಾಜಕೀಯ ಪಕ್ಷವು ಕರೋನಾ ಬಗ್ಗ ಜನರಲ್ಲಿ ಜಾಗೃತಿ ಮೂಡಿಸಿ ಅವರ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡಿಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕಾಂಗ್ರೇಸ್ ಪಕ್ಷ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಕರೋನಾ ಜಾಗೃತಿ ಮೂಡಿಸಿ ಜನರಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳುವ ಅಭಿಯಾನವನ್ನು ಹಮ್ಮಿಕೊಂಡಿದೆ ಯಮಕನಮರಡಿ ಮತಕ್ಷೇತ್ರದಲ್ಲಿ ಒಟ್ಟು 33 ಹಳ್ಳಿಗಳಲ್ಲಿ ಕರೋನಾ ಜಾಗೃತಿ ಮೂಡಿಸುವ ಕಾರ್ಯವನ್ನು ಕಾಂಗ್ರೇಸ್ ಕಾರ್ಯಕರ್ತರು ಯೋಧರಾಗಿ ಕಾರ್ಯ ಮಾಡಬೇಕಾಗಿದೆ.

ಪ್ರತಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡಿ ಅವರಲ್ಲಿ ಕರೋನಾ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಬೇಕು ಲಾಕ್‍ಡೌನ ಸಂದರ್ಭದಲ್ಲಿ ಕ್ಷೇತ್ರದಲ್ಲೆಡೆ ಸ್ಯಾನಿಟೈಜರ, ಮಾಸ್ಕ, ಹಾಗೂ ಆಹಾರ ಕಿಟ್‍ಗಳನ್ನು ವಿತರಿಸಲಾಗಿದ್ದು, ಹೊರರಾಜ್ಯದಿಂದ ಬಂದ ಜನರನ್ನು ಹೋಮಕ್ವಾರೆಂಟನ ಮಾಡಿ ಅವರಲ್ಲಿ ಕರೋನಾ ಜಾಗೃತಿ ಕಾರ್ಯವನ್ನು ಮಾಡಲಾಗಿದೆ ಎಂದು ಹೇಳಿದರು. ಚಿಕ್ಕೋಡಿ ಲೋಕಸಭಾ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಯೊಂದು ಮನೆಗೆ ಹೋಗಿ ಜನರ ಆರೋಗ್ಯವನ್ನು ವಿಚಾರಿಸಿ ಅವರ ಮಾಹಿತಿಯನ್ನು ಸಂಗ್ರಹಿಸಬೇಕು ಮತ್ತು ಕೊರೋನಾ ಯೋಧರಿಗೆ ಕರ್ನಾಟಕ ಕಾಂಗ್ರೇಸ್ ಪಕ್ಷದ ವತಿಯಿಂದ 2 ಲಕ್ಷ ರೂ. ವಿಮೆಯನ್ನು ಮಾಡಲಾಗಿದೆ ಎಂದು ಹೇಳಿದರು. ಆರೋಗ್ಯ ಹಸ್ತ ವೈದ್ಯರಾದ ಡಾ. ಮಾರ್ಟಿನ್ ಶಿವಾಪೂರ ಇವರು ಕರೋನಾ ಯೋಧರಿಗೆ ತರಬೇತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಮಾಜಿ ಸಚಿವ ವೀರಕುಮಾರ ಪಾಟೀಲ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬೆಳಗಾವಿ ಜಿ.ಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿ.ಪಂ. ಸದಸ್ಯರಾದ ಸಿದ್ದನಗೌಡ ಸುಣಗಾರ, ಮಂಜುನಾಥ ಪಾಟೀಲ, ಮಹಾಂತೇಶ ಮಗದುಮ್ಮ, ಫಕೀರವ್ವಾ ಹಂಚಿನಮನಿ, ತಾ.ಪಂ. ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ, ತಾ.ಪಂ.ಸದಸ್ಯ ಸುರೇಶ ಬೆಣ್ಣಿ, ಯಮಕನಮರಡಿ ಬ್ಲಾಕ ಕಾಂಗ್ರೇಸ್ ಅಧ್ಯಕ್ಷರುಗಳಾದ ವೀರಣ್ಣಾ ಬಿಸಿರೊಟ್ಟಿ, ರಾಮಣ್ಣ ಗುಳ್ಳಿ, ಸುನೀಲ ಹಮ್ಮನ್ನವರ, ಕಾಂಗ್ರೇಸ್ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ರಫೀಕ ದರಗಾದ, ಧಾರವಾಡ ಕಾಂಗ್ರೇಸ್ ಬ್ಲಾಕ ಅಧ್ಯಕ್ಷ ಬಸವರಾಜ ಕಿತ್ತೂರ, ಸದಾನಂದ ಡಂಗನ್ನವರ, ಮಹಾವೀರ ಮೊಹಿತೆ, ರವೀಂದ್ರ ಜಿಂಡ್ರಾಳಿ, ಕಿರಣಸಿಂಗ ರಜಪೂತ, ಅಬ್ದುಲಗಣಿ ದರ್ಗಾ, ಮಾರುತಿ ಗುಟಗುದ್ದಿ, ವಿನೋದ ಡೊಂಗ್ರೆ, ಫಜಲ್ ಮಕಾನದಾರ, ರಾಜು ಮಾಯನಾಚ, ಮಲಗೌಡ ಪಾಟೀಲ, ಯಮಕನಮರಡಿ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಲಗೌಡ ಪಾಟೀಲ ಸ್ವಾಗತಿಸಿದರು. ಜಂಗ್ಲಿಸಾಹೇಬ ನಾಯಿಕ ವಂದಿಸಿದರು.

Read All News