ಪ್ರಗತಿಪರ ವಿಚಾರಧಾರೆಯ ನಾಯಕ ಸಾಹುಕಾರ ಸತೀಶ ಜಾರಕಿಹೊಳಿಗೆ ಹುಟ್ಟು ಹಬ್ಬದ ಸಂಭ್ರಮ

  • 23 Dec 2023 , 7:22 AM
  • Belagavi
  • 162
ಕೆಪಿಸಿಸಿ ಸದಸ್ಯ, ಮಾಸ್ಟರ್ ಮೈಂಡ, ಯಮಕನಮರಡಿ ಮತಕ್ಷೇತ್ರದ ಶಾಸಕರಾದ ಸತೀಶ್ ಜಾರಕಿಹೊಳಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ದೂರದೃಷ್ಠಿ ನಾಯಕರಾದ ಸತೀಶ ಜಾರಕಿಹೊಳಿ ಅವರ ವಿಚಾರವೇ ಬೇರೆ, ಕಷ್ಟದಲ್ಲಿದ್ದಾಗ ಜನರಿಗೆ ಸಹಾಯ ಮಾಡುವ ಶೈಲಿಯೇ ವಿಭಿನ್ನ. ರೈತರ ಬೆನ್ನೆಲುಬುಯಾಗಿ ನಿಂತಿರುವ ಅವರು ಕೋರೊನಾ ಸಂಕಷ್ಟದ ಸಮಯದಲ್ಲಿ ಯೋಗ್ಯ ದರದಲ್ಲಿ ತರಕಾರಿಗಳನ್ನು ಖರೀದಿಸಿ ಬಡ ಜನರಿಗೆ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಪ್ರತಿಷ್ಠಿತ ಜಾರಕಿಹೊಳಿ ಕುಟುಂಬದ ಎರಡನೇ ಸಹೋದರರಾದ ಸತೀಶ್ ಜಾರಕಿಹೊಳಿ 1992ರಲ್ಲಿ ರಾಜಕೀಯ ಪ್ರವೇಶ ಮಾಡಿದವರು. ವಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ 1998, 2005ರಲ್ಲಿ ಸತತ ಎರಡು ಭಾರಿ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಾರೆ. ಕ್ಷೇತ್ರ ಪುನರ್ ವಿಂಗಡನೆ ಬಳಿಕ ಯಮಕನಮರಡಿ ಎಸ್.ಟಿ ಮೀಸಲು ಕ್ಷೇತ್ರದಿಂದ 2008, 2013 ಹಾಗೂ 2018 ರಲ್ಲಿ ಸತತ ಮೂರು ಸಲ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆ ಮೊದಲು ಎಐಸಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಜತೆಗೆ ತೆಲಂಗಾಣ ಉಸ್ತುವಾರಿಯನ್ನು ಸಹ ವಹಿಸಿಕೊಂಡಿದ್ದರು. ಆದರೆ ಸಂಪುಟದಲ್ಲಿ ಸ್ಥಾನ ಪಡೆಯಲು ಹಾಗೂ ಬೆಂಬಲಿಗರಿಗೆ ಸ್ಥಾನಮಾನ ಕೊಡಿಸುವಲ್ಲಿ ವಿಫಲರಾದ ಬಳಿಕ ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅವರ ಪಕ್ಷ ಸಂಘಟನೆ ಹಾಗೂ ಅವರ ಜನಪ್ರಿಯತೆ ನೋಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಹುದ್ದೆ ನೀಡಿ ಅವರಿಗೆ ಪಕ್ಷದಲ್ಲಿ ಉನ್ನತ ಜವಾಬ್ದಾರಿ ನೀಡಿದೆ. ಅವರ ಅಪಾರ ಅಭಿಮಾನಿ ಬಳಗಕ್ಕೆ ಸತೀಶ್ ಜಾರಕಿಹೊಳಿ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎನ್ನುವ ಮಹದಾಸೆ ಇದ್ದು ಆದಷ್ಟು ಬೇಗ ಅವರ ಕನಸು ನನಸಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಸತೀಶ್ ಜಾರಕಿಹೊಳಿ ಬಗೆಗಿನ ಕಿರು ಮಾಹಿತಿ
* ವಿದ್ಯಾರ್ಹತೆ: 12ನೇ ತರಗತಿ
* ವೃತ್ತಿ: ಕೃಷಿ, ಕೈಗಾರಿಕೆ
* ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರ
* 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
* 2004ರಿಂದ 2008ರ ತನಕ ವಿಧಾನ ಪರಿಷತ್ ಸದಸ್ಯ
* 2008, 2013 ಹಾಗೂ 2018ರಲ್ಲಿ ವಿಧಾನಸಭಾ ಸದಸ್ಯ
* ಸಿದ್ದರಾಮಯ್ಯನವರ ಸರಕಾರದಲ್ಲಿ ಜವಳಿ ಸಚಿವರಾಗಿದ್ದವರು, ಕಾರಣಾಂತರಗಳಿಂದ ಸ್ಥಾನ ತೊರೆದಿದ್ದರು. 2013ರಲ್ಲಿ ಅಬಕಾರಿ ಸಚಿವರಾಗಿದ್ದರು.

ಸದ್ಯ ಯಮಕನಮರಡಿ ಶಾಸಕರಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಕ್ಷೇತ್ರ, ಜಿಲ್ಲೆ ಅಷ್ಟೇ ಅಲ್ಲದೆ ಇಡಿ ರಾಜ್ಯಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಹಾಗೂ ಕಂದಾಚಾರ, ಮೂಢನಂಬಿಕೆಯ ವಿರುದ್ಧ ಹೋರಾಟ ನಡೆಸುವ ಪ್ರಗತಿಪರ ವಿಚಾರಧಾರೆಯ ಪರವಿರುವ ಏಕೈಕ ನಾಯಕ ಸತೀಶ ಜಾರಕಿಹೊಳಿ ಎಂದರೆ ತಪ್ಪಾಗಲಿಕ್ಕಿಲ್ಲ.

Read All News