ಬಂಕಾಪುರ: ಪಟ್ಟಣದ ಪ್ರಥಮ ದರ್ಜೆ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಕೊರೊನಾ ಮಹಾಮಾರಿ ತಡೆಯಲು ಜಾಗೃತಿ ಜಾಥಾ ನಡೆಸಿ ವ್ಯಾಪಾರಸ್ತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಮಾಸ್ಕ ವಿತರಿಸಿದರು. ಜಾಗೃತಿ ಜಾಥಾ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಿಂದ ಪ್ರಾರಂಭಗೋಂಡು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಹಣ್ಣು, ತರಕಾರಿ, ಪಾನಶಾಪ್, ಆಟೋ ಚಾಲಕರು ಸೇರಿದಂತೆ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ ವಿತರಿಸುವಮೂಲಕ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿಯೇ ಇದೆ, ಸ್ವಚ್ಛತೆಗೆ ಆದ್ಯತೆ ನೀಡಿ, ಒಬ್ಬರಿಂದ ಒಬ್ಬರಿಗೆ ಸುರಕ್ಷಿತ ಅಂತರವಿರಲಿ, ಕಡ್ಡಾಯವಾಗಿ ಮಾಸ್ಕ ದರಿಸಿ, ಸ್ಯಾನಿಟೈಸರ ಉಪಯೋಗಿಸಿ, ಕೋವಿಡ್-19 ತಡೆಯಲು ಸರಕಾರದ ನಿಯಮವನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ನಿಮ್ಮ ಅಮೂಲ್ಯವಾದ ಜೀವವನ್ನು ಕಾಪಾಡುವುದರ ಜೋತೆಗೆ ನಿಮ್ಮ, ನಿಮ್ಮ ಕುಟುಂಬದ ಸಂರಕ್ಷಣೆಯೆ ಹೋಣೆ ನಿಮ್ಮದು ಎಂಬ ಘೋಷ ವಾಕ್ಯಗಳೋಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನ: ಜಾಗೃತಿ ಜಾಥಾ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣಕ್ಕೆ ಬಂದು ಸಮಾರೋಪಗೊಂಡಿತು. ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲೆ ಯಮುನಾ ಕೋಣೆಸರ, ಪ್ರೋ. ಡಿ.ಎಸ್.ಸೊಗಲದ, ಸಂತೋಷಕುಮಾರ ಕಟಕೆ, ಆನಂದ ಇಂದೂರ, ನಿಂಗಪ್ಪ ಕಲಕೋಟಿ, ವಿಜಯ್ ಗುಡಗೇರಿ, ಸುಜಾತಾ ಕಡ್ಲಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.